ಮುಂಬೈ:ಸಲ್ಮಾನ್ ಖಾನ್ ಶರ್ಟ್‌ಲೆಸ್ ಆದರೆ ಮುಗೀತು. ಎಲ್ಲರೂ ಫಿದಾ ಆಗಿ ಬಿಡ್ತಾರೆ. ಅಂತಹ ಸಿಕ್ಸ್‌ಪ್ಯಾಕ್ ಫಿಜಿಕ್ ಇರೋ ಸಲ್ಮಾನ್ ಖಾನ್ ಗೆ ನಿಜಕ್ಕೂ ಸಿಕ್ಸ್ ಪ್ಯಾಕ್ ಇವೆಯೇ ? ಈ ಒಂದು ಪ್ರಶ್ನೆ ಈಗ ಕೇಳಿ ಬರುತ್ತಿದೆ.
ಸಲ್ಮಾನ್ ಖಾನ್ ನಿಜಕ್ಕೂ ಫಿಟ್ ಆಗಿದ್ದಾರೆಯೇ ? ಸಲ್ಲುಗೆ ನಿಜಕ್ಕೂ ಸಿಕ್ಸ್‌ಪ್ಯಾಕ್ ಇವೆಯೇ ? ಈ ಎಲ್ಲ ಪ್ರಶ್ನೆಯನ್ನ ಕೇಳುವಂತೆ ಮಾಡಿದೆ ಈ ಒಂದು ವೀಡಿಯೋ.
ಹೌದು. ಈ ವೀಡಿಯೋದಲ್ಲಿ ಸಲ್ಮಾನ್ ಖಾನ್ ಡ್ಯಾನ್ಸ್ ಪ್ರಾಕ್ಟೀಸ್ ಮಾಡ್ತಿದ್ದಾರೆ. ಇದರಲ್ಲಿ ಸಲ್ಮಾನ್ ಹೊಟ್ಟೆ ಕಾಣುತ್ತದೆ.ಅಲ್ಲಿ ಸಿಕ್ಸ್ ಪ್ಯಾಕ್ ಇಲ್ಲವೇ ಇಲ್ಲ ಅನ್ನೋದು ತಿಳಿಯುತ್ತದೆ.
ಹಾಗಾಗಿಯೇ ಈಗ ಈ ಪ್ರಶ್ನೆ ಎದ್ದಿದೆ. ಆದರೆ ಸಲ್ಮಾನ್ ಅವಶ್ಯ ಇದ್ರೆ ಮಾತ್ರ ವರ್ಕೌಟ್ ಮಾಡ್ತಾರೆ ಅನಿಸುತ್ತದೆ. ಇಲ್ಲದೇ ಇದ್ದಾಗ ಎಂದಿನಂತೆ ಚೆನ್ನಾಗಿಯೇ ತಿಂದು ಹೊಟ್ಟೆ ಬಿಟ್ಟಿರುತ್ತಾರೆ ಅನಿಸುತ್ತದೆ.
ಆದರೆ ಈಗ ಟೆಕ್ನಾಲಜಿ ಸ್ಟಾಂಗ್ ಆಗಿಯೇ ಇದೆ. ಹೊಟ್ಟೆ ಇದ್ದರೂ ಆಗ ಜಾಗದಲ್ಲಿ ಸಿಕ್ಸ್‌ಪ್ಯಾಕ್ ತೋರಿಸಬಹುದು.
PublicNext
06/01/2022 10:59 pm