ಕನ್ನಡದ ಐಶ್ವರ್ಯ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ ಇಂದು ಬಾಲಿವುಡ್ ನ ನಂಬರ್ ಒನ್ ನಟಿ.
ಸದ್ಯ ಬಾಲಿವುಡ್ ಗೆ ಹಾರಿ ಪ್ರಖ್ಯಾತಿ ಗಳಿಸಿದ ಡಿಪ್ಪಿಗೆ ಇಂದು 36 ನೇ ಹುಟ್ಟುಹಬ್ಬ. ಸೆಲೆಬ್ರಿಟಿಗಳು ಸೇರಿದಂತೆ ಅನೇಕ ನಟ-ನಟಿಯರು ದೀಪಿಕಾ ಪಡುಕೋಣೆ ಅವರಿಗೆ ಶುಭಾಶಯ ಕೋರುತ್ತಿದ್ದಾರೆ.
ಇನ್ನು ಈ ವರ್ಷದ ಹುಟ್ಟುಹಬ್ಬದಲ್ಲಿ ದೀಪಿಕಾ ಅವರ ಸಿಕ್ರೇಟ್ ಒಂದು ರಿವೀಲ್ ಆಗಿದೆ. ಇಷ್ಟು ದಿನ ಯಾರ ಬಳಿಯೂ ಹೇಳದ ಒಂದು ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಇಬ್ಬರಿಗೆ ಸಂಬಂಧಿಸಿದ ವಿಚಾರ ಭಾರೀ ಚರ್ಚೆ ಹುಟ್ಟುಹಾಕಿದೆ.
ಗುಟ್ಟಾಗಿ ನಿಶ್ವಿತಾರ್ಥ ಮಾಡಿಕೊಂಡಿದ್ದರಂತೆ ಡಿಪ್ಪಿ-ರಣವೀರ್!
ಇಂದು ದೀಪಿಕಾ ಅವರಿಗೆ ಜನ್ಮದಿನದ ಸಂಭ್ರಮ. ಇದೇ ವೇಳೆ ಅವರು ಸಂದರ್ಶನವೊಂದರಲ್ಲಿ ತಮ್ಮ ನಿಶ್ಚಿತಾರ್ಥ ಗುಟ್ಟಾಗಿ ನಡೆದಿತ್ತು ಎಂದು ಹೇಳಿರುವ ವಿಚಾರ ಇದೀಗ ಸಖತ್ ವೈರಲ್ ಆಗುತ್ತಿದೆ. ಈ ವಿಚಾರ ಇದುವರೆಗೂ ಯಾರುಗೂ ತಿಳಿದಿರಲಿಲ್ಲ. ಕೇವಲ ಕುಟುಂಬಸ್ಥರು, ಆಪ್ತ ಸ್ನೇಹಿತರಿಗಷ್ಟೆ ತಿಳಿದಿತ್ತು. ಇದೀಗ ಈ ವಿಚಾರ ಬಹಿರಂಗಗೊಂಡಿದೆ. ಮದುವೆಗೂ 4 ವರ್ಷ ಮುನ್ನ ಅಂದರೆ 2014ರಲ್ಲಿ ಈ ಜೋಡಿ ಗುಟ್ಟಾಗಿ ರಿಂಗ್ ಬದಲಾಯಿಸಿದ್ದರಂತೆ.
PublicNext
05/01/2022 01:43 pm