ಬೆಂಗಳೂರು : 2017ರಲ್ಲಿ ಬಿಡುಗಡೆಯಾದ ‘ಉಪ್ಪು ಹುಳಿ ಖಾರ’ ಚಿತ್ರದ ಬಳಿಕ ಆ್ಯಂಕರ್ ಅನುಶ್ರೀ ನಿರೂಪಣೆಯಲ್ಲೇ ಬಿಜಿಯಾಗಿದ್ದರು. ಈಗ ಮತ್ತೆ ಚಿತ್ರವೊಂದರಲ್ಲಿ ನಟಿಸಲು ರೆಡಿಯಾಗಿದ್ದಾರೆ.
ನಾಲ್ಕು ವರ್ಷಗಳ ಬಳಿಕ ಮತ್ತೆ ಹಿರಿತೆರೆಗೆ ಬರುತ್ತಿರುವ ಅನುಶ್ರೀ ನಟಿಸುತ್ತಿರುವ ಚಿತ್ರದ ಹೆಸರು ರಿವೀಲ್ ಆಗಿಲ್ಲ. ಆದರೆ ಮಮ್ಮಿ, ದೇವಕಿ ಚಿತ್ರಗಳನ್ನು ನಿರ್ದೇಶಿಸಿರುವ ಲೋಹಿತ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೇ ಲೋಹಿತ್ ಜೊತೆಗೆ ಸಹಾಯಕ ನಿರ್ದೇಶಕರಾಗಿದ್ದ ಪ್ರಭಾಕರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇದೊಂದು ಹಾರರ್ ಚಿತ್ರ ಎನ್ನುವ ಸುಳಿವನ್ನು ಚಿತ್ರ ತಂಡ ಬಿಟ್ಟುಕೊಟ್ಟಿದೆ.
ಇನ್ನು ಚಿತ್ರದ ಕುರಿತು ಮಾತನಾಡಿರುವ ಅನುಶ್ರೀ ಹಾರರ್ ಅಂದರೆ ನನಗಿಷ್ಟ. ಅದರಲ್ಲಿ ಥ್ರಿಲ್ಲಿಂಗ್ ಎಲಿಮೆಂಟ್ ಇರುತ್ತದೆ. ಹಾಗಾಗಿ ಕಥೆ ಕೇಳುತ್ತಲೇ ಮತ್ತೆ ಬಣ್ಣ ಹಚ್ಚುವ ಆಸೆ ಬಂತು. ನಟಿಸಬೇಕು ಅನ್ನೋ ಆಸೆ ನನಗೂ ಇತ್ತು. ಅಷ್ಟರಲ್ಲಿ ಈ ಕಥೆ ಇಷ್ಟವಾಯಿತು. ಹಾಗಾಗಿ, ಮತ್ತೆ ಬಣ್ಣ ಹಚ್ಚುವ ನಿರ್ಧಾರಕ್ಕೆ ಬಂದೆ ಎಂದಿದ್ದಾರೆ.
PublicNext
04/01/2022 02:27 pm