ಮುಂಬೈ:ಬಾಲಿವುಡ್ ನ ನಾಯಕ ನಟ ಸಲ್ಮಾನ್ ಖಾನ್ ಸಾರ್ವಜನಿಕ ಸ್ಥಳದಲ್ಲಿಯೇ ಆಟೋ ಓಡಿಸಿ ಭಾರಿ ವೈರಲ್ ಆಗಿದ್ದಾರೆ. ಸಲ್ಮಾನ್ ಆಟೋ ಓಡಿಸಿರೋ ಆ ವೀಡಿಯೋ ಈಗ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.
ಸಲ್ಮಾನ್ ಖಾನ್ ನೈಟ್ ಔಟ್ ಮಾಡೋದು ಹೆಚ್ಚು. ಮುಂಬೈನ ಪನ್ವೇಲ್ ಫಾರ್ಮ್ ಹೌಸ್ ನಲ್ಲಿಯೆ ಹೆಚ್ಚು ಟೈಮ್ ಕಳೆಯುತ್ತಾರೆ.
ಆದರೆ ಸಲ್ಮಾನ್ ರಾತ್ರಿ ವೇಳೆ ಜನದಟ್ಟೆನ ಇರೋ ರಸ್ತೆಯಲ್ಲಿಯೇ ಆಟೋ ಓಡಿಸಿ ಸುದ್ದಿ ಆಗಿದ್ದಾರೆ. ಸಲ್ಮಾನ್ ಆಟೋ ಓಡಿಸೋದನ್ನ ಕಂಡ ಜನ ಕೂಡ ಆಟೋ ಸುತ್ತ ಮುಗಿ ಬಿದಿದ್ದರು. ಇವರನ್ನ ಚದುರಿಸಲು ಪೊಲೀಸರು ಹರಸಾಹಸ ಪಟ್ಟರು.ಆದರೆ ಆಟೋ ಓಡಿಸಿಕೊಂಡು ಸಲ್ಮಾನ್ ಹೊರಟೇ ಹೋದರು.
ಸಲ್ಮಾನ್ ಈ ಹಿಂದೆ ಕೂಡ ನೈಟ್ ಟೈಮ್ ನಲ್ಲಿಯೇ ಆಟೋ ಓಡಿಸಿ ಸುದ್ದಿ ಆಗಿದ್ದರು. ಆ ಸಾಲಿಗೆ ಈ ಆಟೋ ಚಾಲನೆ ಈಗ ಸೇರ್ಪಡೆ ಆಗಿದೆ. ವೀಡಿಯೋ ಕೂಡ ವೈರಲ್ ಆಗುತ್ತಿದೆ.
PublicNext
31/12/2021 10:49 am