ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ಮೊನ್ನೆ ರಾತ್ರಿ ನಡೆದ ಘಟನೆ ಬಗ್ಗೆ ಈಗ ಕ್ಲಾರಿಟಿ ಕೊಟ್ಟಿದ್ದಾರೆ. ನಾನು ಕುಡಿದಿದ್ದೇ ಅಂತ ನಿಮ್ಮ ಬಳಿ ಸಾಕ್ಷ್ಯಗಳಿವಿಯೇ..? ನಾನು ಹೋಗಿರೋದು ರೆಸ್ಟೋರೆಂಟ್ ಗೆ ಕುಡಿಯಲು ಹೋಗಿಯೇ ಇರಲಿಲ್ಲ. ನಾನು ಅಂದು ಸರಿಯಾಗಿಯೇ ಇದ್ದೇ ಅಂತಲೇ ಈಗ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಮೊನ್ನೆ ರಾತ್ರಿ ಅಂದ್ರೆ ನೈಟ್ ಕರ್ಪ್ಯೂ ಆರಂಭವಾದ ಮೊದಲ ದಿನ ಅದು. ಆ ದಿನ ದಿವ್ಯ ಸುರೇಶ್ ಕುಡಿದು ಗಲಾಟೆ ಮಾಡಿದ್ರು ಅನ್ನೋದೇ ಈಗಾಗಲೇ ಹರಡಿರೋ ಸುದ್ದಿ. ಆದರೆ ಈ ಬಗ್ಗೆ ಮಾಧ್ಯಮದವರದ್ದೇ ತಪ್ಪು ಅನ್ನೋ ಅರ್ಥದಲ್ಲಿಯೇ ದಿವ್ಯ ಸುರೇಶ್ ಮಾತನಾಡಿದ್ದಾರೆ.
ಬೇಡ ಬೇಡ ಅಂದ್ರೂ ಕ್ಯಾಮೆರಾ ತೆಗೆದುಕೊಂಡು ಬಂದು ಚಿತ್ರೀಕರಿಸುತ್ತಿದ್ದರು. ಕೆಲವರಂತೂ ಮೋಬೈಲ್ ನಲ್ಲೂ ಚಿತ್ರೀಕರಿಸಲು ಮುಂದಾಗಿದ್ದರು. ನನ್ನ ಗೆಳೆಯ ಇದೆಲ್ಲಾ ಯಾಕೆ ಅಂತಲೂ ಕೇಳಿದರು. ಇಷ್ಟೇರಿ ಆಗೋರಿದೂ ನಾನು ಕುಡಿದಿರಲಿಲ್ಲ. ಕುಡಿದು ಗಲಾಟೆನೂ ಮಾಡಿಲ್ಲ ಅಂತಲೇ ದಿವ್ಯ ಸುರೇಶ್ ಹೇಳಿದ್ದಾರೆ.
PublicNext
31/12/2021 09:39 am