ಹೈದರಾಬಾದ್: ತೆಲುಗು ಸಿನೆಮಾ ನಟಿ ಸಾಯಿ ಪಲ್ಲವಿ ಅಭಿಮಾನಿಗಳಿಗೆ ಗೊತ್ತಾಗದಂತೆ ಅಭಿಮಾನಿಗಳ ನಡುವೆಯೇ ಕುಳಿತು ತಮ್ಮದೇ ನಟನೆಯ 'ಶ್ಯಾಮ್ ಸಿಂಘಾ ರಾಯ್' ಸಿನಿಮಾ ನೋಡಿದ್ದಾರೆ.
ಯೆಸ್..ಬುರ್ಖಾ ಧರಿಸಿಕೊಂಡು ಹೈದರಾಬಾದ್‌ನ ಥಿಯೇಟರ್‌ಗೆ ಬಂದ ನಟಿ ಸಾಯಿ ಪಲ್ಲವಿ ಸಾಮಾನ್ಯರಂತೆ ಕುಳಿತು ಸಿನಿಮಾ ನೋಡಿದ್ದಾರೆ. ಚಿತ್ರದಲ್ಲಿ ತಮ್ಮ ಎಂಟ್ರಿಯಾದಾಗ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋದನ್ನ ಕಣ್ಣಾರೆ ನೋಡಿ ಖುಷಿಪಡಲು ಸಾಯಿ ಪಲ್ಲವಿ ಈ ರೀತಿ ಮಾಡಿದ್ರಂತೆ.
ಇನ್ನು ಸಿನಿಮಾ ನೋಡಿ ಹೊರಬಂದಾಗ ಸಿನಿಮಾ ಹೇಗಿದೆ ಅಂತ ಪತ್ರಕರ್ತರು ಕೇಳಿದಾಗ ಅದಕ್ಕೆ ಉತ್ತರಿಸದೇ ಸಾಯಿ ಪಲ್ಲವಿ ಮುಂದೆ ಸಾಗಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗುತ್ತಿದೆ.
PublicNext
30/12/2021 07:13 pm