ಹೈದ್ರಾಬಾದ್:ಟಾಲಿವುಡ್ ನ ಗಾಯಕಿ ಮಂಗ್ಲಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕನ್ನಡದ ರಾಬರ್ಟ್ ಚಿತ್ರದ ತೆಲುಗು ವರ್ಶನ್ ನಲ್ಲಿ ಕಣ್ಣಾ ಹೊಡಿಯಾಕೆ ಹಾಡನ್ನ ಹಾಡಿ ಗುಂಗು ಹಿಡಿಸಿದ್ದು ಗೊತ್ತೇ ಇದೆ. ಗಾಯಕಿ ಮಂಗ್ಲಿ,ಡೈರೆಕ್ಟರ್ ರಾಮ್ ಗೋಪಾಲ್ ವರ್ಮ ಅವರ 'ಕೊಂಡ' ಚಿತ್ರದ ವಿಶೇಷ ಹಾಡಿಗೆ ಧ್ವನಿ ಆಗಿದ್ದಾರೆ. ಸ್ವತಃ ಆರ್‌ಜಿವಿ ಈ ಹಾಡಿನ ಮೇಕಿಂಗ್ ವೀಡಿಯೋ ಹಂಚಿಕೊಂಡಿದ್ದಾರೆ.
ಹೌದು ಗಾಯಕಿ ಮಂಗ್ಲಿ ಮತ್ತೊಂದು ಹೈಪಿಚ್ ಹಾಡಿಗೆ ಧ್ವನಿ ಆಗಿದ್ದಾರೆ.ಪೊಲೀಸರನ್ನ ಶ್ಲಾಘಿಸೋ ಈ ಗೀತೆಯನ್ನ ಅಷ್ಟೇ ಅದ್ಭುತವಾಗಿಯೇ ಹಾಡಿದ್ದಾರೆ. ಅದರ ಮೇಕಿಂಗ್ ವೀಡಿಯೋವನ್ನ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಸದ್ಯ ತಮ್ಮ ಟ್ವಿಟರ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಅತಿ ಶೀಘ್ರದಲ್ಲಿಯೇ ಇಡೀ ಹಾಡು ಕೂಡ ಬಿಡುಗಡೆ ಆಗುತ್ತದೆ ಅಂತಲೂ ಬರೆದುಕೊಂಡಿದ್ದಾರೆ.
PublicNext
29/12/2021 11:24 am