ಮಡಿಕೇರಿ : ಶ್ಯಾನೇ ಟಾಪಾಗವ್ಳೆ ನಮ್ ಹುಡ್ಗಿ ಖ್ಯಾತಿಯ ಸ್ಯಾಂಡಲ್ ವುಡ್ ಬೆಡಗಿ ಅದಿತಿ ಪ್ರಭುದೇವ ಸದ್ದಿಲ್ಲದೇ ಎಂಗೇಜ್ ಆಗಿದ್ದಾರೆ.
ಕಿರುತೆರೆಯಿಂದ ಬಣ್ಣದ ಬದುಕು ಆರಂಭಿಸಿ ಸದ್ಯ ಸ್ಯಾಂಡವುಡ್ ವುಡ್ ನಲ್ಲಿ ತನ್ನದೇ ಐಡೆಂಟಿಟಿಯನ್ನ ಕ್ರಿಯೇಟ್ ಮಾಡಿಕೊಂಡಿರುವ ಅದಿತಿ ಪ್ರಭುದೇವ ಕೊಡಗಿನ ಸೊಸೆಯಾಗುತ್ತಿದ್ದಾರೆ.
ಸದ್ಯ ದಾವಣಗೆರೆ ಮೂಲದ ಅದಿತಿ ತನ್ನ ಭಾವಿ ಪತಿಯೊಂದಿಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಾನು ಮದುವೆಯಾಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಎರಡೂ ಕುಟುಂಬಗಳು ತಾಂಬೂಲ ಬದಲಾಯಿಸಿಕೊಂಡಿದ್ದು, ವಿವಾಹದ ನಿಶ್ಚಿತಾರ್ಥವಾಗಿದೆ.
ಸೋಮವಾರಪೇಟೆಯ ಕಾಫಿ ಬೆಳೆಗಾರ ಪಿ.ಡಿ.ಚಂದ್ರಕಾಂತ್ ಹಾಗೂ ಸುಚರಿತ ದಂಪತಿಗಳ ಪುತ್ರ ಯಶಸ್ವಿಯನ್ನು ಅದಿತಿ ವರಿಸಲಿದ್ದಾರೆ.
ಯಶಸ್ವಿ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು, ಕೃಷಿ ಕ್ಷೇತ್ರದ ಕಡೆಗೂ ಒಲವು ಹೊಂದಿದ್ದಾರೆ. ಗ್ರಾಮೀಣ ಭಾಗದ ಸೊಗಡಿನ ಬಗ್ಗೆ ಅತೀವ ಅಭಿಮಾನ ಹೊಂದಿರುವ ಮತ್ತು ಕೃಷಿಕ ಕುಟುಂಬದ ಬಗ್ಗೆ ಆಸಕ್ತಿಯಿದ್ದ ಅದಿತಿ ತಮ್ಮ ನಿರೀಕ್ಷೆಯ ಹುಡುಗನೊಂದಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.
2017 ರಲ್ಲಿ ನಟ ಅಜಯ್ ರಾವ್ ಜೊತೆ ‘ಧೈರ್ಯಂ’ ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ಸದ್ಯ ಸಾಕಷ್ಟು ಸಿನಿಮಾ ಆಫರ್ ಗಳನ್ನು ಕೈಯಲ್ಲಿಟ್ಟುಕೊಂಡು ಕನ್ನಡ ಚಿತ್ರರಂಗದ ಬ್ಯುಸಿ ನಟಿಯಾಗಿದ್ದಾರೆ.
PublicNext
28/12/2021 12:30 pm