ಹೈದ್ರಾಬಾದ್:ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ರಾಜ್ಯದ ನೈಟ್ ಕರ್ಪ್ಯೂ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗಿನ ಕರ್ಫ್ಯೂ ಜಾರಿ ಗೊಳಿಸಿದರೇ ಅದ್ಹೇಗೆ ಸೋಂಕು ತಡೆಯಲು ಸಾಧ್ಯ ಅಂತಲೇ ಟ್ವಿಟರ್ ಮೂಲಕ ಪ್ರಶ್ನೆ ಮಾಡಿದ್ದಾರೆ.
ಒಮ್ರಿಕಾನ್ ಸೋಂಕು ಪ್ರಕರಣ ಹೆಚ್ಚುತ್ತಿವೆ. ಯಾವ ಟೈಮ್ ನಲ್ಲಿ ಸೋಂಕು ಹರಡುತ್ತದೆ ಗೊತ್ತಿಲ್ಲ. ಆದರೆ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ವರೆಗೂ ಸೋಂಕು ಹರಡುವುದಿಲ್ಲ ಅಂತ ಹೇಗೆ ಡಿಸೈಡ್ ಮಾಡಲು ಆಗುತ್ತದೆ ಅಂತಲೇ ಆರ್‌ಜಿವಿ ಕೇಳಿದ್ದಾರೆ.
ಈ ಟೈಮ್ ನಲ್ಲಿ ವೈರಸ್ ಮಲಗಿರುತ್ತವೆ ಅಂತೇನಾದರೂ ರಾಜಕೀಯ ವ್ಯಕ್ತಿಗಳಿಗೆ ದೇವರು ಹೇಳಿದ್ದಾನೆಯೇ ಅಂತಲೂ ಟ್ವಿಟರ್ ಮೂಲಕ ವ್ಯಂಗ್ಯವಾಡಿದ್ದಾರೆ ರಾಮ್ ಗೋಪಾಲ್ ವರ್ಮಾ.
PublicNext
27/12/2021 10:22 am