ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏನ್ ಇದು ಸನ್ನಿಲಿಯೋನ್ 'ಮಧುಬನ್' ಹಾಡಿನ ವಿವಾದ-ಕ್ಷಮೆ ಕೇಳ್ತಾರಾ ನೀಲಿ ತಾರೆ ?

ಭೂಪಾಲ್:ನೀಲಿ ಜಗತ್ತಿನ ತಾರೆ ಸನ್ನಿಲಿಯೋನ್ ಕುಣಿದು ಕುಪ್ಪಳಿಸಿ 'ಮಧುಬನ್ ಮೇ ರಾಧಿಕಾ ನಾಚೆ' ವೀಡಿಯೋ ಹಾಡೊಂದು ವಿವಾದಕ್ಕೀಡಾಗಿದೆ.ಹಿಂದೂ ಧರ್ಮಕ್ಕೆ ಈ ಹಾಡಿನ ಮೂಲಕ ಅಪಮಾನ ಮಾಡಲಾಗಿದೆ. ಇದನ್ನ ಕೂಡಲೇ ಬದಲಿಸಬೇಕು.ಸನ್ನಿ ಲಿಯೋನ್ ಸೇರಿದಂತೆ ಗಾಯಕರಾದ ಶರೀಬ್ ಮತ್ತುತೋಶಿ ಕ್ಷಮೆಯಾಚಿಸಲೇಬೇಕು.ಇಂತಹ ಒಂದು ಒತ್ತಾಯವನ್ನ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಮಾಡಿದ್ದಾರೆ.

ಹಿಂದೂಗಳು ರಾಧೆಯನ್ನ ಪೂಜಿಸುತ್ತಾರೆ. ಆಕೆಯನ್ನ ಆರಾಧಿಸುತ್ತಾರೆ. ಆದರೆ ಸನ್ನಿಲಿಯೋನ್ ಅಭಿನಯಿಸಿರೋ ವೀಡಿಯೋ ಹಾಡಿನಲ್ಲಿ ರಾಧೆಗೆ ಅವಮಾನಿಸಲಾಗಿದೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ. ಇದನ್ನ ಈ ಕೂಡಲೇ ಬದಲಿಸಲೇಬೇಕು. ಗಾಯಕರು ಮತ್ತು ಸನ್ನಿ ಲಿಯೋನ್ ಕ್ಷಮೆ ಕೇಳಲೇಬೇಕು. ಇಲ್ಲದೇ ಇದ್ದರೇ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಮಿಶ್ರಾ ಎಚ್ಚರಿಸಿದ್ದಾರೆ.

ಮಧುಬನ್ ಹಾಡಿಗೆ ವಿರೋಧ ವ್ಯಕ್ತವಾಗುತ್ತಲೇ ಸರಿಗಮ ಮ್ಯೂಜಿಕ್ ಕಂಪನಿ ಎಚ್ಚೆತ್ತುಕೊಂಡಿದೆ. ಹಾಡಿನ ರಿಲಿಕ್ಸ್ ಅನ್ನ

ಇನ್ನೂ ಮೂರು ದಿನದಲ್ಲಿ ಬದಲಿಸೋದಾಗಿಯೇ ತಿಳಿಸಿದೆ.

Edited By : Shivu K
PublicNext

PublicNext

27/12/2021 10:12 am

Cinque Terre

78.33 K

Cinque Terre

1