ಬೆಂಗಳೂರು:ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅಭಿನಯದ ರೈಡರ್ ಚಿತ್ರ ನೋಡಿ ಈಗೊಂದು ಸಲಹೆ ಕೊಟ್ಟಿದ್ದಾರೆ.ಹೌದು ಆ ಸಲಹೆ ಸಿನಿಮಾರಂಗಕ್ಕೆ ಸಂಬಂಧಿಸಿದ್ದೇ ಆಗಿದೆ.
ನಿಖಿಲ್ ನಟನೆಯ ರೈಡರ್ ಚಿತ್ರ ವೀಕ್ಷಿಸಿದ ಬಳಿಕ ಕುಮಾರಸ್ವಾಮಿ ಅವ್ರು ತುಂಬಾ ಸಂತೋಷಪಟ್ಟಿದ್ದಾರೆ. ಅಷ್ಟೇ ಅಲ್ಲ, ರಾಜಕೀಯಕ್ಕಿಂತಲೂ ತಮ್ಮ ಪುತ್ರ ಚಿತ್ರರಂಗದಲ್ಲಿಯೇ ಮುಂದುವರೆಯಲಿ ಅಂತಲೂ ಅಭಿಪ್ರಾಯ ಪಟ್ಟಿದ್ದಾರೆ.
ಚಿತ್ರರಂಗದಲ್ಲಿ ನಾಯಕ ನಟರ ಕೊರತೆ ಇದೆ. ನಿಖಿಲ್ ಕೂಡ ಅದೇ ಸ್ಥಾನ ತುಂಬುತ್ತಾನೆ. ರಾಜಕೀಯದಲ್ಲಿ ಹೆಚ್ಚು ತೊಡಗಿಕೊಳ್ಳುವದಕ್ಕಿಂತಲೂ ಸಿನಿಮಾರಂಗದಲ್ಲಿಯೇ ಮುಂದುವರೆದರೆ ಒಳ್ಳೆಯದು. ಅದನ್ನ ನಿಖಿಲ್‌ಗೆ ಹೇಳುವುದಾಗಿಯೂ ಕುಮಾರಸ್ವಾ ತಿಳಿಸಿದ್ದಾರೆ.
PublicNext
27/12/2021 07:41 am