ಬೆಂಗಳೂರು:ಕನ್ನಡ ಚಿತ್ರರಂಗದಲ್ಲಿ ಕರ್ನಾಟಕ ಬಂದ್ ಗೆ ಸರಿಯಾಗಿಯೇ ಒಮ್ಮತ ಮೂಡಿ ಬಂದಿಯೇ ಇಲ್ಲ. ಕನ್ನಡ ಪರ ಹೋರಾಟಗಾರರು ಡಿಸೆಂಬರ್-31 ಕ್ಕೆ ಬಂದ್ ಮಾಡಲು ನಿರ್ಧರಿಸಿದ್ದಾರೆ. ಆದರೆ ಕನ್ನಡ ಚಿತ್ರರಂಗ ಇದಕ್ಕೆ ರೆಡಿ ಆಗಿಯೇ ಇಲ್ಲ.
ಸಮ್ಮತಿನೂ ಸೂಚಿಸುತ್ತಿಲ್ಲ.
ಡಿಸೆಂಬರ್ 31ಕ್ಕೆ ಬಂದ್ ಮಾಡಿದರೇ ನಾವು ಸಾಯಬೇಕಾಗುತ್ತದೆ. ಡಿಸೆಂಬರ್-30 ಕ್ಕೆ ನಮ್ಮ ಲವ್ ಯು ರಚ್ಚು ಚಿತ್ರ ತೆರೆಗೆ ಬರುತ್ತಿದೆ. ಬಂದ್ ಆದರೆ ಕೋಟಿ ಕೋಟಿ ಲಾಸ್ ಆಗುತ್ತದೇ ಅಂತಲೇ ಈಗ ನಿರ್ದೇಶಕ-ನಿರ್ಮಾಪಕ ಗುರು ದೇಶಪಾಂಡೆ ಹೇಳಿದ್ದಾರೆ.
ಡಿಸೆಂಬರ್-31ಕ್ಕೆ ಕರ್ನಾಟಕ ಬಂದ್ ಮಾಡಿದರೇ ಕೋಟಿ-ಕೋಟಿ ಲಾಸ್ ಆಗುತ್ತದೆ.ಈ ದಿನ ಕರ್ನಾಟಕ ಬಂದ್ ಆದರೆ ನಾವು ಸಾಯಬೇಕಾಗುತ್ತದೆ. ಅದರ ಬದಲು ಡಿಸೆಂಬರ್-30 ರಂದು ಬಂದ್ ಮಾಡಿ ಅಂತಲೇ ಗುರು ದೇಶಪಾಂಡೆ ಸಲಹೆ ಕೊಡುತ್ತಿದ್ದಾರೆ.
PublicNext
25/12/2021 09:30 am