ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿ-31ರ 'ಕರ್ನಾಟಕ ಬಂದ್' ಗೆ ಚಿತ್ರರಂಗದ ನೈತಿಕ ಬೆಂಬಲ

ಬೆಂಗಳೂರು:ಎಂಇಎಸ್ ಬ್ಯಾನ್ ಮಾಡಿ ಅಂತಲೇ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪಕ್ಷಗಳು ಆಗ್ರಹಿಸುತ್ತಿವೆ. ಪ್ರತಿಭಟನೆಯನ್ನೂ ಮಾಡುತ್ತಿವೆ. ಆದರೆ ಕನ್ನಡ ಚಿತ್ರರಂಗ ಇದನ್ನ ವಿರೋಧಿಸುತ್ತಿದೆ. ಆದರೆ ಈ ಬಂದ್ ಗೆ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಕೇವಲ ನೈತಿಕ ಬೆಂಬಲ ನೀಡಿದೆ. ಅದಕ್ಕೇನೆ ಈಗ ಕನ್ನಡ ಪರ ಸಂಘಟನೆಗಳು ಗರಂ ಆಗಿವೆ.

ಎಂಇಎಸ್ ಬ್ಯಾನ್ ಮಾಡಲೇಬೇಕು ಅಂತ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಡಿಸೆಂಬರ್‌-29 ರ ಒಳಗೆ ಬಂದ್ ಎಂಇಎಸ್‌ ಬ್ಯಾನ್ ಮಾಡದೇ ಇದ್ದರೇ ಡಿಸೆಂಬರ್-31 ಕ್ಕೆ ಕರ್ನಾಟಕ ಬಂದ್ ಮಾಡುತ್ತೇವೆ ಅಂತಲೂ ಕನ್ನಡ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.

ಆದರೆ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಲಿ ಈ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಿದೆ. ಕರ್ನಾಟಕ ಬಂದ್ ಬೇಡ ಅನ್ನೋ ಅರ್ಥದಲ್ಲಿಯೇ ಹೋರಾಟಗಾರರಿಗೆ ತನ್ನ ಅಭಿಪ್ರಾಯ ತಿಳಿಸಿದೆ.ಆದರೆ ಇದರಿಂದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಗರಂ ಆಗಿದ್ದಾರೆ. ತಾವು ಬಂದ್ ಮಾಡುವುದನ್ನ ನಿಲ್ಲಿಸೋದೇಯಿಲ್ಲ ಅಂತಲೇ ಹೇಳ್ತಿದ್ದಾರೆ.

Edited By :
PublicNext

PublicNext

25/12/2021 08:28 am

Cinque Terre

38.59 K

Cinque Terre

0