ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರ ದಿನ ವಾಕ್‌ನಿಂದಲೇ ಶುರು ಆಗುತ್ತದೆ. ಈ ವಯಸ್ಸಿನಲ್ಲೂ ದೇಹವನ್ನ ದಂಡಿಸಿ ಫಿಟ್ ಆಗಿಯೇ ಇದ್ದಾರೆ. ಮಧ್ಯೆ ಒಂದಷ್ಟು ದಪ್ಪ ಆಗಿದ್ದರು. ಆದರೆ ಈಗ ಸ್ಲಿಮ್ ಅಂಡ್ ಫಿಟ್ ಆಗಿದ್ದಾರೆ. ತಮ್ಮ ಎಂದಿನ ವಾಕ್‌ನಲ್ಲಿ ಆದ ಅನುಭವನ್ನ ಈಗ ವೀಡಿಯೋ ಸಮೇತ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಜಗ್ಗೇಶ್ ಅವರು ಬಿಂದಾಸ್ ಬಿಡಿ. ಯಾರಿಗು ಜಗ್ಗಲ್ಲ. ಯಾರಿಗು ಬಗ್ಗಲ್ಲ. ಲೈಫ್ ಅನ್ನ ಎಂಜಾಯ್ ಮಾಡ್ತಾರೆ. ಅಂದರಂತೆ ರಾಯರ ದಿನ ಗುರುವಾರ 4 ಕೀಮಿ ವಾಕ್ ಹೊರಟ್ಟಿದ್ದರು. ಆಗ ದಾರಿಯಲ್ಲಿ ಸಿಕ್ಕ ಪೊಲೀಸರ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಸಾಮಾನ್ಯ ಜನರ ಜೊತೆಗೂ ಫೋಟೋ ಕ್ಲಿಸಿಕಿಕೊಂಡು ಖುಷಿಪಟ್ಟಿದ್ದಾರೆ.
PublicNext
24/12/2021 11:50 am