ಮುಂಬೈ:ಬಾಲಿವುಡ್ ನಟಿ ಸುಷ್ಮಿತಾ ಸೇನ್ ಈಗ ಪರಿ ಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ. ಗಾಸಿಪ್ ಮಾಡುವ ಗಾಸಿಪ್ ವೀರರಿಗೆ ಬದುಕಿ ಬದಕುಲು ಬಿಡಿ ಅಂತಲೇ ಕೇಳಿಕೊಳ್ಳುತ್ತಿದ್ದಾರೆ. ಯಾಕೆ ಅಂತ ಹೇಳ್ತೀವಿ ನೋಡಿ.
ಸುಷ್ಮಿತಾ ಸೇನ್ ಮತ್ತು ಗೆಳೆಯ ರೋಹಮನ್ ಶಾಲ್ ಹೆಚ್ಚು ಕಡಿಮೆ ಮೂರು ವರ್ಷದಿಂದ ರಿಲೇಷನ್ ಅಲ್ಲಿಯೇ ಇದ್ದರು.ಆದರೆ ಇವರ ಸಂಬಂಧ ಮುರಿದು ಬಿದ್ದ ವಿಷಯ ಎಲ್ಲೆಡೆ ಹರಡುತ್ತಲೇ ಇದೆ. ಇದರ ಸುತ್ತ ಗಾಸಿಪ್ ಗಳೂ ಹರಿದಾಡಿವೆ. ಇದರಿಂದ ಬೇಸರಗೊಂಡ ಸುಷ್ಮಿತಾ ಈಗ ಒಂದು ಸತ್ಯ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದಾರೆ.
ಹೌದು ನನ್ನ ಮತ್ತು ನನ್ನ ಗೆಳೆ ರೋಹಮನ್ ಶಾಲ್ ಜೊತೆಗಿನ ಸಂಬಂಧ ಮುಗಿದಿದೆ. ನಾವು ಗೆಳೆಯರಾಗಿದ್ದೇವೆ.ಗೆಳೆಯರಾಗಿಯೇ ಮುಂದುವರೆಯುತ್ತೇವೆ. ಇಲ್ಲ ಸಲ್ಲದ ಹೇಳಲೇ ಬೇಡಿ. ನೀವೂ ಬದುಕಿ ನನ್ನನ್ನೂ ಬದುಕಲು ಬಿಡಿ ಅಂತಲೇ ಸುಷ್ಮಿತಾ ಇನ್‌ಸ್ಟಾಗ್ರಾ್ನಲ್ಲಿ ಬರೆದುಕೊಂಡು ಸಂಬಂಧ ಮುರಿದ ಬಗ್ಗೆ ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ.
PublicNext
24/12/2021 07:43 am