ಮುಲ್ಕಿ: ಕನ್ನಡ ಚಿತ್ರರಂಗದ ಖ್ಯಾತ ನಟಿ ರಚಿತಾ ರಾಮ್ ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ದೇವಸ್ಥಾನದ ಅರ್ಚಕ ನರಸಿಂಹ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು. ದೇವಸ್ಥಾನದ ವತಿಯಿಂದ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಈ ಸಂದರ್ಭ ರಂಗಕರ್ಮಿ ಚಂದ್ರಶೇಖರ ಸುವರ್ಣ, ನಾಗಸ್ವರ ವಾದಕ ನಾಗೇಶ್ ಬಪ್ಪನಾಡು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಸಿಬ್ಬಂದಿ ಶಿವಶಂಕರ್, ಕಾರ್ತಿಕ್, ಜ್ಯೋತಿಷಿ ಶ್ರೀವತ್ಸ ಭಟ್, ಶಶಿಕಲಾ ಉಪಾಧ್ಯಾಯ ಕೊಲಕಾಡಿ ಮತ್ತಿತರರು ಉಪಸ್ಥಿತರಿದ್ದರು
ಈ ಸಂದರ್ಭ ಅವರು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ಕರಾವಳಿಯ ದೇವಸ್ಥಾನಗಳು ಭಕ್ತಿಯ ತಾಣಗಳಾಗಿದ್ದು ಎಲ್ಲರಿಗೂ ಹೊಸವರ್ಷದ ಶುಭಾಶಯಗಳೊಂದಿಗೆ ದೇವರು ಆಯುರಾರೋಗ್ಯ ಐಶ್ವರ್ಯ ನೀಡಲಿ ಎಂದರು.
ಕರಾವಳಿಯ ಪ್ರಸಿದ್ಧ ಪಬ್ಬಾಸ್ ನಲ್ಲಿ ಐಸ್ ಕ್ರೀಂ ತಮ್ಮ ಫೇವರೆಟ್ ಎಂದು ಹೇಳಿದ ಅವರು ಕರಾವಳಿ ಶೈಲಿಯ ವಿಶೇಷ ಖಾದ್ಯಗಳು ಹಾಗೂ ಊಟ ಬಲು ಇಷ್ಟ ಎಂದರು.
ಕೋವಿಡ್ ನಿಂದಾಗಿ ಚಲನಚಿತ್ರರಂಗ ಕಳೆದ ಎರಡು ವರ್ಷಗಳಲ್ಲಿ ಸಂಕಷ್ಟಕ್ಕೀಡಾಗಿದ್ದು ಸುಧಾರಿಕೆ ಕಾಣುತ್ತಿದೆ. ಎಲ್ರೂ ಕನ್ನಡ ಚಿತ್ರ ನೋಡಿ ಆಶೀರ್ವದಿಸಿ ಎಂದರು.
ಇತ್ತೀಚೆಗೆ ನಿಧನರಾದ ಪುನೀತ್ ರಾಜಕುಮಾರ್ ಬಗ್ಗೆ ಹೇಳಿದ ಅವರು ಅಪ್ಪು ರನ್ನು ವರ್ಣಿಸಲು ಶಬ್ದಗಳೇ ಇಲ್ಲ. ಅವರು ಮಹಾನ್ ವ್ಯಕ್ತಿ ದೇವರಿದ್ದ ಹಾಗೆ ಅಪ್ಪು ಯಾವಾಗಲೂ ನಮ್ಮ ಜೊತೆ ಇದ್ದಾರೆ. ಕನ್ನಡ ಚಿತ್ರರಂಗದ ಮೇಲೆ ಅವರ ಆಶೀರ್ವಾದ ಯಾವಾಗಲೂ ಇದೆ ಎಂದು ಹೇಳಿ ಗದ್ಗದಿತರಾದರು.
ದೇವಸ್ಥಾನದಲ್ಲಿ ಚಲನಚಿತ್ರ ನಟಿ ರಚಿತಾ ರಾಮ್ ಜೊತೆ ಸೆಲ್ಫಿ ತೆಗೆಯಲು ಅಭಿಮಾನಿಗಳು ಮುಗಿಬಿದ್ದರು. ಇದರಿಂದ ವಿಚಲಿತರಾಗದೆ ಎಲ್ಲಾ ಅಭಿಮಾನಿಗಳ ಜೊತೆ ಸೆಲ್ಫಿ ಹಾಗೂ ಫೋಟೋ ತೆಗೆಸಿಕೊಂಡರು
PublicNext
23/12/2021 03:13 pm