ದಿ.ಅಪ್ಪು ನೆನೆದು ಮೋಹಕ ತಾರೆ ರಮ್ಮಾ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಪ್ಪು ಅಂತಿಮ ದರ್ಶನಕ್ಕೆ ಬಂದಿದ್ದ ರಮ್ಯಾ ಕಣ್ಣೀರಿಟ್ಟು ಅಪ್ಪು ಜೊತೆ ಮತ್ತೆ ಸಿನಿಮಾ ಮಾಡುವ ಆಸೆ ಇತ್ತು. ಆದರೆ ಅವರೇ ನಮ್ಮ ಜೊತೆ ಇಲ್ಲ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದರು.
ಸ್ಯಾಂಡಲ್ ವುಡ್ ನಲ್ಲಿ ರಮ್ಯಾ, ಪವರ್ ಸ್ಟಾರ್ ಜೋಡಿ ಸೂಪರ್ ಹಿಟ್ ಎನಿಸಿಕೊಂಡಿತ್ತು. ಚಿತ್ರರಂಗಕ್ಕೆ ಅಪ್ಪು ಸಿನಿಮಾದಲ್ಲಿ ರಮ್ಯಾ ಎಂಟ್ರಿ ಪಡೆದಿದ್ದರು. ಇವರಿಬ್ಬರ ಕಾಂಬಿನೇಷನ್ ನಲ್ಲಿ ಅಭಿ,ಆಕಾಶ್, ಅರಸು ಚಿತ್ರಗಳು ಸೂಪರ್ ಹಿಟ್ ಆಗಿತ್ತು. ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಜೋಡಿ ಎಂದು ಕರೆಯತ್ತಿದ್ದರು. ರಮ್ಯಾ ಸದ್ಯಕ್ಕೆ ಚಿತ್ರರಂಗದಿಂದ ದೂರಾಗಿದ್ದಾರೆ. ಆದರೆ ಅವರಿಗಿರುವ ಬೇಡಿಕೆ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ.
PublicNext
21/12/2021 06:41 pm