ನಟನೆಯಿಂದ ಮಾತ್ರ ಸೂಪರ್ ಸ್ಟಾರ್ ಎನಿಸಿಕೊಳ್ಳುವುದಲ್ಲ, ಚಿತ್ರೋದ್ಯಮದ ಹೊರತಾಗಿಯೂ ಹೀರೊ ಎನಿಸಿಕೊಳ್ಳುವವರು ಬೆರಳೆಣಿಕೆಯಷ್ಟು ಮಾತ್ರ ಅಂತಹವರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡಾ ಒಬ್ಬರು.ಸದ್ಯ ತಲೈವಾ ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಅಭಿಮಾನಿಗೆ 30 ಸೆಕೆಂಡ್ ಅವಧಿಯ ಒಂದು ವಿಶೇಷ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ.
ಸ್ಟಾರ್ ನಟ "ಹಲೋ ಸೌಮ್ಯಾ, ಹೇಗಿದ್ದೀರಿ? ಚಿಂತಿಸಬೇಡಿ, ನೀವು ಶೀಘ್ರದಲ್ಲಿಯೇ ಗುಣಮುಖರಾಗುತ್ತೀರಿ. ಕ್ಷಮಿಸಿ ಕನ್ನಾ, ಈ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ನಾನು ನಿಮ್ಮನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ ಮತ್ತು ನನ್ನ ಆರೋಗ್ಯವೂ ನಿಜವಾಗಿಯೂ ಸರಿಯಾಗಿಲ್ಲ, ಇಲ್ಲದಿದ್ದರೆ, ನಾನು ಖಂಡಿತವಾಗಿಯೂ ನಿಮ್ಮನ್ನು ಭೇಟಿ ಮಾಡುತ್ತಿದ್ದೆ. ನೀವು ಧೃತಿಗೆಡಬೇಡಿ, ದೇವರು ಇದ್ದಾನೆ ಮತ್ತು ನಾನು ನಿಮಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಚಿಂತೆ ಬೇಡ ಕನ್ನಾ, ನೀವು ಶೀಘ್ರದಲ್ಲಿಯೇ ಗುಣ ಮುಖರಾಗುತ್ತೀರಿ" ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರಿನ ನಿವಾಸಿಯಾಗಿರುವ ಸೌಮ್ಯಾ ಅನಾರೋಗ್ಯದಿಂದ ಪ್ರಸ್ತುತ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
PublicNext
20/12/2021 03:10 pm