ಹುಬ್ಬಳ್ಳಿ: ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆ ಮುಂದುವರೆದರೇ,ಈ ಸಂಘಟನೆಯನ್ನ ಬ್ಯಾನ್ ಮಾಡಬೇಕು ಅಂತಲೇ ನಟ ನೆನಪಿರಲಿ ಪ್ರೇಮ್ ಹೇಳಿದ್ದಾರೆ.
ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಬಂದು ಆರೂಢರ ದರ್ಶನ ಪಡೆದ ಬಳಿಕ ನೆನಪಿರಲಿ ಪ್ರೇಮ್, ಮಾಧ್ಯಮಕ್ಕೂ ಮಾತನಾಡಿದ್ದಾರೆ.
ಎಂಇಎಸ್ ಪುಂಡಾಟಿಕೆ ಹೆಚ್ಚಾಗಿದೆ. ಅದನ್ನ ನಿಲ್ಲಿಸಬೇಕು. ಅದು ಸಹನಿಯವೂ ಅಲ್ಲ.ಎಂಇಎಸ್ ವಿರುದ್ಧ ಇಡೀ ಕನ್ನಡ ಚಿತ್ರರಂಗ ಹೋರಾಟಕ್ಕೆ ಇಳಿದರೇ ಜನತೆಗೆ ತೊಂದರೆ ಆಗುತ್ತದೆ.
ಹಾಗಂತ ಎಂಇಎಸ್ ಪುಂಡಾಟಿಕೆ ಸಹಿಸೋದಿಲ್ಲ. ಅದು ಮುಂದುವರೆದರೇ ರಾಜ್ಯದಲ್ಲಿ ಎಂಇಎಸ್‌ಬ್ಯಾನ್ ಆಗಲೇಬೇಕು ಅಂತಲೇ ಹೇಳಿದ್ದಾರೆ ನೆನಪಿರಲಿ ಪ್ರೇಮ್.
PublicNext
19/12/2021 01:15 pm