ಮುಂಬೈ: 'ಮಿಸ್ಟರ್ ಐರಾವತ' ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಊರ್ವಶಿ ರೌಟೇಲಾರ ಹೊಸ ಫೋಟೋವನ್ನ ನೋಡಿ ಇದು ಊರ್ವಶಿನಾ ಅಥ್ವಾ ಐಶ್ವರ್ಯಾ ರೈ ನಾ ಅಂತ ಅಭಿಮಾನಿಗಳು ಕನ್ಫ್ಯೂಸ್ ಆಗಿದ್ದಾರೆ.
ಬ್ಲಾಕ್ ಡ್ರೆಸ್ನಲ್ಲಿ ಗಾರ್ಜಿಯಸ್ ಆಗಿ ಕಾಣ್ತಿದ್ದ ಊರ್ವಶಿಯ ಹೊಸ ಫೋಟೋನ ಸಡೆನ್ ಆಗಿ ನೋಡಿದಾಗ ಐಶ್ವರ್ಯಾ ರೈ ತರವೇ ಕಾಣಲಿದೆ. ಹಾಗಾಗಿ ಅಭಿಮಾನಿಗಳು ಹಾಗೆಯೇ ಕಮೆಂಟ್ಸ್ ಮಾಡಿದ್ದಾರೆ.
ಮೊನ್ನೆಮೊನ್ನೆಯಷ್ಟೇ ಊರ್ವಶಿ ಇಸ್ರೇಲ್‌ನ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿ, ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ರು.
ಈ ಸುದ್ದಿ ವಿಶ್ವದಾದ್ಯಂತ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ. ಹಾಗೆಯೇ 2021ರ 'ಮಿಸ್ ಯುನಿವರ್ಸ್' ಸ್ಪರ್ಧೆಗೆ ಊರ್ವಶಿ ರೌಟೇಲಾ ಅವರು ನಿರ್ಣಾಯಕರಾಗಿ ಹೋಗಿದ್ರು. ಈ ಸಮಯದಲ್ಲಿ ಮರೀನಾ ರಿವೇರಾ ಅವ್ರು ಊರ್ವಶಿಗೆ ಡ್ಯಾನ್ಸ್ ಮಾಡೋದನ್ನು ವೇದಿಕೆ ಮೇಲೆ ಹೇಳಿಕೊಟ್ಟಿರೋ ವೀಡಿಯೋ ಕೂಡಾ ವೈರಲ್ ಆಗಿತ್ತು.
PublicNext
18/12/2021 08:35 am