ಭಾರತದ ಮೊದಲ ಮಹಿಳಾ ಪ್ತಧಾನಿ ಇಂದಿರಾ ಗಾಂಧಿ ಕುರಿತಾದ ಇನ್ನೊಂದು ಬಾಲಿವುಡ್ ಸಿನಿಮಾ ಇನ್ನೇನು ಸೆಟ್ಟೇರಲಿದೆ.
'ಸ್ಯಾಮ್ ಬಹುದ್ದೂರ್' ಎಂಬ ಶೀರ್ಷಿಕೆ ಇರುವ ಈ ಚಿತ್ರದಲ್ಲಿ ದಂಗಲ್ ಖ್ಯಾತಿಯ ನಟಿ ಫಾತಿನಾ ಸಾನಾ ಶೇಖ್ ಅವರು ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಲಿದ್ದಾರೆ.
ಇದು ದೇಶದ ಮಹಾನ್ ನಾಯಕ ಫೀಲ್ಡ್ ಮಾರ್ಷಲ್ ಸ್ಯಾಮ್ ಹಾರ್ಮುಸ್ಜಿ ಜೆಮ್‌ಶೆಡ್ಜಿ ಮಾಣಿಕ್ ಷಾ ಅವರ ಜೀವನಾಧಾರಿತ ಸಿನಿಮಾ ಆಗಿದೆ. ನಾನು ಈ ಪಾತ್ರದಲ್ಲಿ ನಟಿಸಲು ಕಾತುರಳಾಗಿದ್ದೇನೆ. ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ಮಹಿಳೆಯಾಗಿದ್ದ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸುವ ಸವಾಲು ನನ್ನ ಮುಂದಿದೆ ಎಂದು ಫಾತಿಮಾ ಹೇಳಿದ್ದಾರೆ.
PublicNext
17/12/2021 08:31 pm