ಬೆಂಗಳೂರು : ಕರ್ನಾಟಕ ಕ್ರಶ್ ಎಂದೇ ಖ್ಯಾತಿ ಆಗಿರುವ ಕನ್ನಡದಿಂದಲ್ಲೇ ಇತರ ಭಾಷೆಗಳಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಈಗಾ ಕನ್ನಡನೇ ಬರ್ತಿಲ್ವಂತೆ.
ಹೌದು ನಟ ಅಲ್ಲು ಅರ್ಜುನ ಅಭಿನಯದ ಪುಷ್ಪ ಸಿನಿಮಾದಲ್ಲಿ ಕನ್ನಡದ ನಟಿ ರಶ್ಮಿಕಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರ ಇದೇ ಡಿಸೆಂಬರ್ 17ರಂದು ರಿಲೀಸ್ ಆಗಲಿದೆ.
ಈ ಚಿತ್ರ ಕನ್ನಡದಲ್ಲೂ ಡಬ್ ಆಗಿದೆ. “ಪುಷ್ಪ” ಚಿತ್ರದ ಪ್ರಮೊಷನ್ ಗಾಗಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಆ್ಯಂಕರ್ ಚಿತ್ರದ ಟ್ರೈಲರ್ ನಲ್ಲಿಯ ಒಂದು ಡೈಲಾಗನ್ನು ಕನ್ನಡದಲ್ಲಿ ಹೇಳುವಂತೆ ಕೋರುತ್ತಿದ್ದಂತೆ ರಶ್ಮಿಕಾ ತೆಲಗಿನಲ್ಲಿ ಡಬಿಂಗ್ ಮಾಡಿ ಮಾಡಿ ಕನ್ನಡ ಕಷ್ಟ ಎನ್ನುವ ದಾಟಿಯಲ್ಲಿ ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ.
ಮಾತ್ರವಲ್ಲದೆ ಕನ್ನಡಾಭಿಮಾನಿಗೆ ಬೇಸರವನ್ನು ತಂದಿದೆ. ಇನ್ನು ವೇದಿಕೆ ಮೇಲೆ ರಶ್ಮಿಕಾ ಕನ್ನಡ ಬಿಟ್ಟು ಎಲ್ಲ ಭಾಷೆಯಲ್ಲೂ ಮಾತನಾಡಿ ಮತ್ತೆ ಎಲ್ಲರ ಕೆಂಗಣ್ಣಿಗೆ ಗುರಿ ಆಗಿದ್ದಾರೆ.
PublicNext
16/12/2021 04:01 pm