ಮುಂಬೈ: ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ತಮ್ಮ 49ನೇ ಹುಟ್ಟುಹಬ್ಬದ ಕೆಲವು ದಿನಗಳ ಮೊದಲು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಹೌದು. ನಟ ಜಾನ್ ಅಬ್ರಹಾಂ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಇನ್‌ಸ್ಟಾದಲ್ಲಿ 9.7 ಮಿಲಿಯನ್ ಫಾಲೋವರ್ಸ್ ಹೊಂದಿರುವ ಜಾನ್ ತಮ್ಮ ಡಿಸ್‌ಪ್ಲೇ ಫೋಟೋವನ್ನು ಸಹ ತೆಗೆದುಹಾಕಿದ್ದಾರೆ. ಆದರೆ ಯಾವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಬಗ್ಗ ಮಾಹಿತಿ ನೀಡಿಲ್ಲ. ಜಾನ್ ಅಬ್ರಾಹಂ ಅಥವಾ ಅವರ ತಂಡದ ಯಾರೊಬ್ಬರೂ ಈ ಬಗ್ಗೆ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ. ನಟ ಜಾನ್ ಅಬ್ರಹಾಂ ಅವರಿಗೆ ಡಿಸೆಂಬರ್ 17 ರಂದು 49 ವರ್ಷ ತುಂಬಲಿದೆ.
PublicNext
14/12/2021 04:34 pm