ಬಾಲಿವುಡ್ ನಟಿ ಅಂಕಿತಾ ಲೋಖಂಡೆಗೆ ಇದೀಗ ಮದುವೆಯ ಸಂಭ್ರಮ...ಡಿಸೆಂಬರ್ ೧೪ ರಂದು ಅಂಕಿತಾ ತಮ್ಮ ಬಹುಕಾಲದ ಗೆಳೆಯ ಉದ್ಯಮಿ ವಿಕ್ಕಿ ಜೈನ್ನ ವರಿಸಲಿದ್ದಾರೆ. ಇವರಿಬ್ಬರ ಮೆಹಂದಿ ಕಾರ್ಯಕ್ರಮದ ವೀಡಿಯೋ ಎಲ್ಲೆಡೆ ಶೇರ್ ಆಗಿದ್ದು ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಹಿಂದಿಯ ಪವಿತ್ರ್ ರಿಶ್ತಾ ಸೀರಿಯಲ್ ಮೂಲಕ ಬಹಳ ಖ್ಯಾತಿ ಪಡೆದ ಅಂಕಿತಾ ನಂತರ ಕೆಲ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸೀರಿಯಲ್ ಮೂಲಕ ಪರಿಚಯವಾದ ಸುಶಾಂತ್ ಸಿಂಗ್ ರಜಪೂತ್ ಹಾಗೂ ಅಂಕಿತಾ ರೀಲ್ ಅಷ್ಟೇ ಅಲ್ಲದೇ ರಿಯಲ್ನಲ್ಲೂ ಅದ್ಭುತ ಜೋಡಿ ಎನಿಸಿಕೊಂಡಿದ್ರು. ನಂತರ ಇಬ್ಬರ ನಡುವೆ ಬ್ರೇಕ್ಅಪ್ ಆಗಿತ್ತು. ಸುಶಾಂತ್ ನಿಧನದ ನಂತರವೂ ಅಂಕಿತಾ ಸುಶಾಂತ್ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡು ಸುದ್ದಿಯಾಗಿದ್ರು. ಕಳೆದ ೩ ವರ್ಷಗಳಿಂದ ಅಂಕಿತಾ, ಉದ್ಯಮಿ ವಿಕ್ಕಿ ಜೈನ್ ಜೊತೆ ಡೇಟಿಂಗ್ ನಡೆಸುತ್ತಿದ್ದು, ಇಬ್ಬರೂ ಇದೀಗ ಮದುವೆಯ ಸಂಭ್ರಮದಲ್ಲಿದ್ದಾರೆ.
PublicNext
13/12/2021 03:36 pm