ಮುಂಬೈ: ಮೊನ್ನೆಮೊನ್ನೆಯಷ್ಟೇ ಬಾಲಿವುಡ್ ನಟಿ ಮಲೈಕಾ ಅರೋರಾ, ಮಾಲ್ಡೀವ್ಸ್ನಲ್ಲಿ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಡೆಸಿ ಸುದ್ದಿಯಾಗಿದ್ರು. ಇದೀಗ ಮಾಜಿ ಪತಿ ಅರ್ಬಾಝ್ ಖಾನ್ ಹಾಗೂ ಪುತ್ರ ಅರ್ಹಾನ್ ಖಾನ್ ಜೊತೆ ನಿನ್ನೆ ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದು ಆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಮಲೈಕಾ ಹಾಗೂ ಅರ್ಬಾಝ್ ಇಬ್ಬರೂ ವಿದೇಶದಿಂದ ಬಂದ ಮಗನನ್ನ ಬರಮಾಡಿಕೊಳ್ಳಲು ಮುಂಬೈ ಏರ್ಪೋರ್ಟ್ಗೆ ಬಂದಿದ್ರು. ಮಗ ಬರ್ತಿದ್ದಂತೆ ಅವನನ್ನ ತಬ್ಬಿಕೊಂಡು ಮಲೈಕಾ ಭಾವುಕರಾದ್ರು. ಜೊತೆಗೆ ಮಾಜಿ ಪತಿ ಅರ್ಬಾಝ್ ಜೊತೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
PublicNext
11/12/2021 03:06 pm