ಮುಂಬೈ:ಕನ್ನಡದ ಕೆಜಿಎಫ್-02 ಚಿತ್ರದ ಅಧೀರಾ ಪಾತ್ರಕ್ಕೆ ಬಾಲಿವುಡ್ ನ ನಟ ಸಂಜಯ್ ದತ್ ಡಬ್ಬಿಂಗ್ ಮಾಡಿದ್ದಾರೆ. ಮುಂಬೈನ ಸ್ಟುಡಿಯೋದಲ್ಲಿ ಡಬ್ಬಿಂಗ್ ಮಾಡ್ತಿರೋ ಸಂಜಯ್ ದತ್ ಪೋಟೋವೊಂದನ್ನ ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಚಿತ್ರದ ಡೈರೆಕ್ಟರ್ ಪ್ರಶಾಂತ್ ನೀಲ್ ಈ ಸುದ್ದಿಯನ್ನ ಬಹಿರಂಗ ಪಡಿಸಿದ್ದಾರೆ.
ಕೆಜಿಎಫ್-2 ಚಿತ್ರ ಬಹು ಭಾಷೆಯಲ್ಲಿಯೇ ರಿಲೀಸ್ ಆಗುತ್ತಿದೆ. ಹೀಗಾಗಿ ಸಂಜಯ್ ದತ್ ಎಲ್ಲ ಭಾಷೆಗೂ ಈ ಮೂಲಕ ಪರಿಚಯ ಆಗುತ್ತಿದ್ದಾರೆ. ಆದರೆ ಕನ್ನಡದಲ್ಲೂ ಡಬ್ಬಿಂಗ್ ಮಾಡಿದ್ದಾರೆಯೇ ಅನ್ನೋ ಪ್ರಶ್ನೆನೂ ಇದೆ. ಅದನ್ನ ತೆರೆ ಮೇಲೆನೆ ನೋಡಬೇಕೋ ಏನೋ. ಸದ್ಯಕ್ಕೆ ಈ ವಿಷಯ ಹೊರಬಿದ್ದಿಲ್ಲ.ಬದಲಾಗಿ ಚಿತ್ರದ ಅಧೀರಾ ಪಾತ್ರಕ್ಕೆ ಸಂಜಯ್ ದತ್ ಡಬ್ಬಿಂಗ್ ಮಾಡಿದ್ದಾರೆ ಅನ್ನೋದೇ ಸುದ್ದಿ ಆಗಿದೆ. ಮುಂದಿನ ವರ್ಷ ಏಪ್ರೀಲ್-14 ರಂದು ಚಿತ್ರ ರಿಲೀಸ್ ಆಗುತ್ತಿದೆ. ಅಷ್ಟೇ ನಿರೀಕ್ಷೆನೂ ಹುಟ್ಟುಹಾಕಿದೆ.
PublicNext
08/12/2021 04:06 pm