ಬೆಂಗಳೂರು: ಅಗಲಿದ ನಟ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಸಾಕ್ಷ್ಯಚಿತ್ರ ಗಂಧದಗುಡಿ ಟೀಸರ್ ರಿಲೀಸ್ ಆಗಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್‌ಕುಮಾರ್ ಟೀಸರ್ ನೋಡಿ ಖುಷಿನೂ ಆಗ್ತಿದೆ, ದುಃಖವೂ ಆಗ್ತಿದೆ ಎಂದಿದ್ದಾರೆ.
ಅರಣ್ಯ ಹಾಗೂ ವನ್ಯಜೀವಿಗಳನ್ನ ಕಾಪಾಡಿ ಕೊಳ್ಳದಿದ್ದರೆ ಪೃಕೃತಿ ವಿಕೋಪಗಳು ನಡೆಯುತ್ತವೆ. ಸಾಕ್ಷ್ಯಚಿತ್ರಧ ಟೀಸರ್ ಈಗಿನ ಸಂದರ್ಭಕ್ಕೆ ತಕ್ಕಂತಿದೆ. ಆದರೆ ಅಪ್ಪು ಇಲ್ಲ ಎನ್ನುವ ಕೊರಗು ಕಾಡುತ್ತಿದೆ. ಆದ್ರು ಅಪ್ಪು ಇಲ್ಲ ಎಂದು ನಾವು ಅಂದುಕೊಂಡಿಲ್ಲ. ಅವರು ನಮ್ಮೊಂದಿಗೆ ಇದ್ದಾರೆ. ಸಾಕ್ಷ್ಯಚಿತ್ರದಲ್ಲಿ "ಪವರ್ ಸ್ಟಾರ್" ಶೀರ್ಷಿಕೆ ಹಾಕಬೇಡಿ ಎಂದು ಅಪ್ಪು ಕೇಳಿಕೊಂಡಿದ್ದು ಅದು ದೊಡ್ಡತನ. ಅಪ್ಪುಗೆ ಅಪ್ಪ-ಅಮ್ಮನ ಎರಡೂ ಕಲೆ ಒಲಿದು ಬಂದಿದೆ. ನಾವು ಬರೀ ನಟನೆಯತ್ತ ಹೋಗಿದ್ದೇವೆ. ಅಪ್ಪು ಈ ಡಾಕ್ಯುಮೆಂಟರಿ ಬಗ್ಗೆ ನನ್ನ ಜೊತೆ ಮಾತಾಡಿದ್ರು. ಅದ್ರೆ ತೋರಿಸಿರಲಿಲ್ಲ ಎಂದು ಶಿವಣ್ಣ ಅಪ್ಪು ಅವರನ್ನು ನೆನೆಸಿಕೊಂಡರು.
1ನೇ ತಾರೀಖಿನಂದು ರಿಲೀಸ್ ಮಾಡೋದಾಗಿ ಹೇಳಿದ್ರು.. ಆಮೇಲೆ ಸಿಕ್ಕಿರಲಿಲ್ಲ ಭಜರಂಗಿ ಫಂಕ್ಷನ್ನಲ್ಲೇ ಸಿಕ್ಕಿದ್ದು. ವೈಲ್ಡ್ ಕಾರ್ಡ್ ಲೈಫ್ ಡಾಕ್ಯುಮೆಂಟರಿ ಮಾಡೋದು ಬಹಳ ವಿಶೇಷವಾಗಿರುತ್ತದೆ. ಭಜರಂಗಿಯಲ್ಲೂ ಈ ಸಂದೇಶ ಇತ್ತು. ಅಶ್ವಿನಿ ಅವರು ಮದುವೆ ಆಗಿದ್ದೇ ಪವರ್ ಸ್ಟಾರ್ ಜೊತೆಗೆ. ಹೀಗಾಗಿ ಎಲ್ಲವನ್ನೂ ನಿಭಾಯಿಸುವ ಕಲೆ ಅವರಿಗಿದೆ. ಅವರು ಗಂಡ-ಹೆಂಡತಿ ತರ ಇರಲಿಲ್ಲ. ಬದಲಾಗಿ ಫ್ರೆಂಡ್ಸ್ ರೀತಿ ಇದ್ದರು. ನಾವೆಲ್ಲ ಅಶ್ವಿನಿ ಅವರೊಂದಿಗೆ ಇದ್ದೇವೆ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.
PublicNext
06/12/2021 04:42 pm