ಬೆಂಗಳೂರು : ಹಿರಿಯ ನಟ ಶಿವರಾಂ ಅವರ ಆರೋಗ್ಯ ಇನ್ನಷ್ಟು ಗಂಭೀರ ಪರಿಸ್ಥಿತಿ ತಲುಪಿದೆ ಎಂದು ಡಾ.ಎಸ್ ಎನ್ ಮೋಹನ್ ಮಾಹಿತಿ ನೀಡಿದ್ದಾರೆ.
ಪವಾಡದ ರೀತಿಯಲ್ಲಿ ಶಿವರಾಂ ಅವರು ಚೇತರಿಸಿಕೊಳ್ಳಬಹುದು ಎನ್ನುವ ಭರವಸೆಯಲ್ಲಿದ್ದ ನಮ್ಮ ನಿರೀಕ್ಷೆ ಹುಸಿಯಾಗುವ ಹಾಗೆ ಇದೆ. ಈ ಮಾತನ್ನು ನಿಮ್ಮ ಮುಂದೆ ನಿಂತು ಮಾತನಾಡಲು ಕಷ್ಟವಾಗುತ್ತಿದೆ.
ಸದ್ಯ ಶಿವರಾಂ ಅವರ ಕಿಡ್ನಿ, ಲಿವರ್ ವರ್ಕ್ ಆಗುತ್ತಿದಿಯೇ ಹೊರತು ಹಾರ್ಟ್ ವರ್ಕ್ ಆಗುತ್ತಿಲ್ಲ. ಇನ್ನು ಹೆಚ್ಚು ಸಮಯ ಅವರು ನಮ್ಮ ಜೊತೆ ಇರಲು ಸಾಧ್ಯವಿಲ್ಲ ಎನ್ನುವ ಮಾತು ಹೇಳಲು ದುಃಖವಾಗುತ್ತಿದೆ ಎಂದು ವೈದ್ಯರು ಕಣ್ಣೀರು ಇಟ್ಟಿದ್ದಾರೆ.
ಯಾವ ಸಮಯದಲ್ಲಿ ಏನ್ ಬೇಕಾದ್ರು ಆಗಹುದು ಬ್ರೈನ್ ಮಾತ್ರವಲ್ಲ ಈಗ ಹಾರ್ಟ್ ಕೂಡ ಕಂಪ್ರೆಸ್ ಆಗ್ತಿದೆ. ಹಾರ್ಟ್ ಬೀಟ್ ಕಮ್ಮಿ ಆಗ್ತಿದೆ.ಬಿಪಿ ಕಮ್ಮಿ ಆಗ್ತಿದೆ .ಅವರ ಆರೋಗ್ಯದಲ್ಲಿ ಇಂಪ್ರುಮೆಂಟ್ ಆಗುತ್ತೆ ಅನ್ನೋದು ಕಷ್ಟ ಸದ್ಯದ ಪರಿಸ್ಥಿತಿಯಲ್ಲಿ ಹಾರ್ಟ್ ಯಾವಾಗ ಬೇಕಾದ್ರು ಕೆಲಸ ನಿಲ್ಲಿಸ ಬಹುದು.
ನಮ್ಮ ಪ್ರಯತ್ನ ನಾವು ಮಾಡ್ತಿದ್ದೇವೆ ಮುಂದಿನದನ್ನ ತಿಳಿಸುತ್ತೇವೆ ಸದ್ಯದ ಪರಿಸ್ಥಿತಿಯಲ್ಲಿ ಅವರ ಆರೋಗ್ಯ ಕೈಮೀರಿದೆ ಎಂದು ಹೇಳಿದರು.
PublicNext
04/12/2021 01:26 pm