ಮುಂಬೈ:ಬಾಲಿವುಡ್ ನಾಯಕಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಮದುವೆ ಡೇಟ್ ಆಲ್ ಮೋಸ್ಟ್ ಫಿಕ್ಸ್ ಆಗಿದೆ. ಡಿಸೆಂಬರ್-12 ಮತ್ತು 17 ರವರೆಗೂ ರಾಜಸ್ಥಾನದ ಹೋಟೆಲ್ ನಲ್ಲಿ ಇವರ ಮದುವೆ ನಡೆಯುತ್ತಿದೆ.ಇವರ ಮದುವೆಗೆ ವಿಶೇಷ ಮೆಹಂದಿಯನ್ನೇ ಬಳಸಲಾಗುತ್ತಿದೆ.ಇದರ ಬೆಲೆ ಕೇಳಿದರೆ ನಿಮಗೆ ಶಾಕ್ ಆಗುತ್ತದೆ. ಬನ್ನಿ, ಹೇಳ್ತಿವಿ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ಶಾಸ್ತ್ರ ಈಗ ಶುರು ಆಗಿವೆ. ಒಂದೊಂದೇ ಸುದ್ದಿಗಳೂ ಹೊರ ಬೀಳುತ್ತಿವೆ. ಅದರಲ್ಲಿ ಮೆಹೆಂದಿ ಶಾಸ್ತ್ರಕ್ಕೆ ಬಂದ್ರೆ, ರಾಸಾಯನಿಕ ಬಳಸದೆ ಇರೋ ಮೆಹೆಂದಿಯನ್ನೆ ಇಲ್ಲಿ ಬಳಸಲಾಗುತ್ತಿದೆ. ಜೋದತ್‌ಪುರ್ ಪಾಲಿ ಜಿಲ್ಲೆಯ ಸೋಜತ್ ಮೆಹೆಂದಿಯನ್ನೆ ಇಲ್ಲಿ ಬಳಸಲಾಗುತ್ತಿದೆ.
ತುಂಬಾ ದುಬಾರಿ ಆಗಿಯೇ ಇರೋ ಈ ಮೆಹೆಂದಿಯನ್ನ ಕೈಗಳಿಂದಲೇ ತಯಾರಿಸಲಾಗುತ್ತದೆ. ಇದರ ತಯಾರಿಕೆಗೆ 50 ಸಾವಿರದಿಂದ 1 ಲಕ್ಷದವರೆಗೂ ವೆಚ್ಚ ಆಗುತ್ತದೆ. ಆದರೆ ಇದನ್ನ ತಯಾರಿಸೋ ಮೆಹೆಂದಿ ಕಲಾವಿದರು ಫ್ರೀಯಾಗಿಯೇ ಮಾಡಿಕೊಡ್ತಿದ್ದಾರೆ ಅನ್ನೋ ಸುದ್ದಿ ಈಗ ವೈರಲ್ ಆಗುತ್ತದೆ. ಆದರೆ ಇದು ನಿಜವೇ ಅನ್ನೋ ಪ್ರಶ್ನೆನೂ ಎದ್ದಿದೆ.
PublicNext
26/11/2021 06:35 pm