ಮುಂಬೈ:ಟಾಲಿವುಡ್ ನ ಹೆಸರಾಂತ ರಾಷ್ಟ್ರ ಪ್ರಶಸ್ತಿ ವಿಜೇತ ನೃತ್ಯ ನಿರ್ದೇಶಕ ಶಿವಶಂಕರ್ ಅವರು ಕೋವಿಡ್ ನಿಂದ ಬಳಲುತ್ತಿದ್ದಾರೆ. ವೈದಕೀಯ ಬಿಲ್ ಕಟ್ಟಲೂ ಕೂಡ ಪರದಾಡುತ್ತಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೇನೇ ಬಾಲಿವುಡ್‌ನ ಖಳನಾಯಕ ನಟ ಸೋನು ಸೂದ್ ಸಹಾಯ ಹಸ್ತಚಾಚಿದ್ದಾರೆ.
ಶಿವಶಂಕರ್ ಅವರ ಆರೋಗ್ಯ ಹದಗೆಟ್ಟಿದೆ. ಕೋವಿಡ್ ಕಾರಣದಿಂದ ಹೆಚ್ಚಿನ ಚಿಕಿತ್ಸೆನೂ ಬೇಕಿದೆ. ಆದರೆ ಇವರ ಬಳಿ ದುಡ್ಡಿಲ್ಲ.ಇವರಿಗೆ ಸಹಾಯ ಮಾಡಿ ಎಂದು ಟ್ವಿಟರ್ ಮೂಲಕ ತೆಲುಗು ಮಾಧ್ಯಮ ಸಲಹೆಗಾರ ವಂಶಿ ಕಾಕಾ ತಿಳಿಸಿದ್ದಾರೆ. ಇದಕ್ಕೆ ರಿಪ್ಲೈ ಮಾಡಿರೋ ನಟ ಸೋನು ಸೂದ್, ಈಗಾಗಲೇ ನಾನು ಇವರ ಟಚ್‌ನಲ್ಲಿದ್ದೇನೆ. ನನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡುತ್ತೇನೆ ಅಂತಲೂ ತಿಳಿಸಿದ್ದಾರೆ.
PublicNext
25/11/2021 03:47 pm