ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಜಿಎಫ್ ಸ್ಟಾರ್ ಯಶ್ ಬಳಿ ಆಮೀರ್ ಖಾನ್ ಸಾರಿ ಕೇಳಿದ್ದೇಕೆ ?

ಮುಂಬೈ: ಬಾಲಿವುಡ್‌ನ ನಾಯಕ ನಟ ಆಮೀರ್ ಖಾನ್ ಕನ್ನಡದ ನಾಯಕನ ಯಶ್ ಅವರ ಬಳಿ ಕ್ಷಮೆ ಕೇಳುವ ಮೂಲಕ ಭಾರಿ ಸುದ್ದಿ ಆಗಿದ್ದಾರೆ. ಯಾಕೆ ಅಂತ ಹೇಳ್ತೀವಿ ಬನ್ನಿ.

ಆಮೀರ್ ಖಾನ್ ಅಭಿನಯದ ಲಾಲ್‌ ಸಿಂಗ್ ಚಡ್ಡಾ ಮತ್ತು ಯಶ್ ಅಭಿನಯದ ಕೆಜಿಎಫ್-2 ಚಿತ್ರ ಏಪ್ರಿಲ್ -14 ರಂದು ಒಂದೇ ದಿನ ರಿಲೀಸ್ ಆಗುತ್ತಿವೆ. ಈ ಸುದ್ದಿಯಿಂದ ಎರಡೂ ತಂಡದಲ್ಲಿ ಒಂದು ರೀತಿ ಕಾಂಪಿಟೇಷನ್ ಭಾವನೆ ಮೂಡಿತ್ತು. ಈಗಲೂ ಅದು ಇದ್ದೇ ಇದೆ.

ಲಾಲ್ ಸಿಂಗ್ ಚೆಡ್ಡಾ ಚಿತ್ರದಲ್ಲಿ ನಾನು ಮೊಟ್ಟ ಮೊದಲ ಬಾರಿಗೆ ಸಿಖ್ ಪಾತ್ರವನ್ನ ಮಾಡಿದ್ದೇನೆ. ಈ ಪಾತ್ರದ ಈ ಚಿತ್ರ ಸಿಖ್‌ ಸಮುದಾಯ ಆಚರಿಸೋ ಬೈಸಾಕಿ ದಿನವೇ ರಿಲೀಸ್ ಆದರೆ ಒಳ್ಳೆಯದು ಅನ್ನೋ ಕಾರಣಕ್ಕೆ, ಏಪ್ರೀಲ್-14 ರಂದು ಚಿತ್ರ ರಿಲೀಸ್ ಮಾಡುತ್ತಿದ್ದೇವೆ.

ಈ ಹಿನ್ನೆಲೆಯಲ್ಲಿಯೇ ಈಗಾಗಲೇ ನಾನು ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು,ನಿರ್ದೇಶಕ ಪ್ರಶಾಂತ್ ನೀಲ್,ನಾಯಕ ನಟ ಯಶ್ ಅವರ ಬಳಿ ಮೆಸೇಜ್ ಮಾಡುವ ಮೂಲಕ ಕ್ಷಮೇ ಕೇಳಿದ್ದೇನೆ ಎಂದು ಆಮೀರ್ ಖಾನ್ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Edited By :
PublicNext

PublicNext

25/11/2021 02:11 pm

Cinque Terre

33.7 K

Cinque Terre

4