ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುದೀಪ್ ವಿಕ್ರಾಂತ್ ರೋಣ:ಮಿಲನಾ ಇನ್-ಶ್ರದ್ದಾ ಔಟ್

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದಲ್ಲಿ ಒಂದು ದೊಡ್ಡ ಬದಲಾವಣೆ ಆಗಿದೆ. ನಟ ಶ್ರದ್ದಾ ಶ್ರೀನಾಥ್ ಜಾಗದಲ್ಲಿ ಕನ್ನಡದ ಮತ್ತೊಬ್ಬ ನಟಿ ಬಂದು ಹೊಸ ಅಲೆ ಎಬ್ಬಸಿದ್ದಾರೆ.

ವಿಕ್ರಾಂತ್ ರೋಣ ಕನ್ನಡದ ಬಿಗ್ ಬಜೆಟ್ ಸಿನಿಮಾ.ತನ್ನ ವಿಶೇಷ ಟ್ರೈಲರ್,ಟೀಸರ್ ನಿಂದ ಈಗಲೇ ಭಾರಿ ಸೌಂಡ್ ಮಾಡುತ್ತಿದೆ. ಸುದೀಪ್ ಪಾತ್ರವೂ ಅಷ್ಟೇ ವಿಶೇಷವಾಗಿಯೇ ಇದೆ. ಇಂತಹ ವಿಶೇಷತೆಗಳಲ್ಲಿ ನಾಯಕಿಯ ಪಾತ್ರವೂ ವಿಶೇಷವಾಗಿಯೇ ಇದೆ.ಅದರಲ್ಲಿ ಈ ಮೊದಲು ಶ್ರದ್ದಾ ಶ್ರೀನಾಥ್ ಅಭಿನಯಿಸಲಿದ್ದಾರೆ ಅನ್ನೋ ಸುದ್ದಿ ಇತ್ತು.

ಆದರೆ ಈಗ ಅದೇ ಪಾತ್ರವನ್ನ ಮಿಲನಾ ನಾಗರಾಜ್ ಮಾಡುತ್ತಿದ್ದಾರೆ.ಅದೇ ಸುದ್ದಿನೇ ಈಗ ವೈರಲ್ ಆಗುತ್ತಿರೋದು. ಈ ಬಗ್ಗೆ ಅಧಿಕೃತವಾಗಿಯ ಟೀಮ್ ಎಲ್ಲೂ ಇನ್ನೂ ಹೇಳಿಕೊಂಡಿಲ್ಲ.ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಹರಿದಾಡುತ್ತಲೇ ಇದೆ.

Edited By :
PublicNext

PublicNext

23/11/2021 09:40 pm

Cinque Terre

31.32 K

Cinque Terre

1