ಮುಂಬೈ: ಹೆಣ್ಣುಮಕ್ಕಳಿಗೆ ಮನೆಯವರ ಭಾವನಾತ್ಮಕ ಬೆಂಬಲ ಅತೀ ಮುಖ್ಯವಾಗಿರುತ್ತದೆ.ಆಕೆಯ ಪ್ರತಿ ಹೆಜ್ಜೆಗೂ ಅದರ ಅವಶ್ಯಕತೆ ಇದ್ದೇ ಇರುತ್ತದೆ ಎಂದು ಬಾಲಿವುಡ್ ನಟಿ ರವೀನಾ ಟಂಡನ್ ಹೇಳಿದ್ದಾರೆ.
ಆರಣ್ಯಕ್ ಹೆಸರಿನ ವೆಬ್ ಸೀರೀಸ್‌ನಲ್ಲಿ ಪೊಲೀಸ್ ಪಾತ್ರ ಮಾಡಿದ ರವೀನಾ ಟಂಡನ್ ಈ ಮಾತು ಹೇಳಿದ್ದಾರೆ.ಹೆಣ್ಣು ಮಕ್ಕಳಿಗೆ ತಮ್ಮ ಪ್ರೀತಿ ಪಾತ್ರರಿಂದ ಭಾವನಾತ್ಮಕ ಬೆಂಬಲ ಎಲ್ಲ ಕಾಲಕ್ಕೂ ಬೇಕಾಗುತ್ತದೆ.
ಇದು ಹೆಣ್ಣುಮಕ್ಕಳ ವೃತ್ತಿ ಬೆಳವಣಿಗೆಯಲ್ಲೂ ಅತಿ ಮುಖ್ಯವಾದ ಪಾತ್ರ ನಿರ್ವಹಿಸುತ್ತದೆ ಎಂದು ಹೇಳಿದ್ದಾರೆ. ತಮ್ಮ ಈ ಚಿತ್ರದ ಕಸ್ತೂರಿ ಡೋಗ್ರಾ ಪಾತ್ರದ ಮೂಲಕ ಈ ಎಲ್ಲ ವಿಷಯವನ್ನ ತಿಳಿದೆ. ಅದಕ್ಕೆ ಈ ಪಾತ್ರವನ್ನ ನಿರ್ವಹಿಸಿದೆ ಅಂತಲೇ ವಿವರಿಸಿದ್ದಾರೆ ರವೀನಾ ಟಂಡನ್.
PublicNext
23/11/2021 08:59 pm