ಹೈದರಾಬಾದ್: ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಅರ್ಹಾ ಅವಳ ಹೆಸರಲ್ಲಿ ನೊಬೆಲ್ ದಾಖಲೆ ನಿರ್ಮಾಣ ಆಗಿದೆ. ಅತಿ ಚಿಕ್ಕ ವಯಸ್ಸಿಗೆ ಅಲ್ಲು ಅರ್ಹಾ ಚೆಸ್ ಟ್ರೇನರ್ ಆಗಿದ್ದಾಳೆ. ಹೌದು ಅಲ್ಲು ಅರ್ಜುನ್ ಮಗಳಾದ ಅಲ್ಲು ಅರ್ಹಾ ಚೆಸ್ ಆಡುವ ಮೂಲಕವಾಗಿ ನೊಬೆಲ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ್ದಾಳೆ.
ಅಲ್ಲು ಅರ್ಹಾ ಕುಟುಂಬದ ಸದಸ್ಯರ ಎದುರು ಚೆಸ್ ಆಡಿದ್ದಾಳೆ. ಈ ವೀಡಿಯೋವನ್ನು ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಅಲ್ಲು ಅರ್ಹಾಗೆ ನೊಬೆಲ್ ವರ್ಲ್ಡ್ ರೆಕಾರ್ಡ್ ನೀಡಿ ಗೌರವಿಸಲಾಗಿದೆ. ಇದು ಅಲ್ಲು ಅರ್ಜುನ್ ಕುಟುಂಬಕ್ಕೆ ಖುಷಿ ನೀಡಿದೆ. ಅಲ್ಲು ಅರ್ಹಾ ಕೂಡ ಚಿತ್ರರಂಗಕ್ಕೆ ಬರುತ್ತಿದ್ದಾಳೆ.
ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾಗೆ ಇನ್ನೂ 5ರ ಪ್ರಾಯವಾಗಿದೆ. ಈ ಪುಟಾಣಿಗೆ ಸಮಂತಾ ಅಕ್ಕಿನೇನಿ ನಟನೆಯ ಶಾಕುಂತಲಂ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಸಿನಿಮಾ ಕ್ಷೇತ್ರ ಮಾತ್ರವಲ್ಲದೇ ಅಲ್ಲು ಅರ್ಹಾ ಅವಳ ಹೆಸರಿನಲ್ಲಿ ನೊಬೆಲ್ ದಾಖಲೆಯನ್ನು ಬರೆದುಕೊಂಡಿದ್ದಾಳೆ.
PublicNext
22/11/2021 10:58 pm