ಬೆಂಗಳೂರು: ನಟ ರಮೇಶ್ ಅರವಿಂದ್ ನಿರ್ದೇಶಿಸಿ ಅಭಿನಯಿಸಿದ '100' ಚಿತ್ರವನ್ನು ವೀಕ್ಷಿಸಿದ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಚಿತ್ರದ ಕಥಾವಸ್ತುವನ್ನು ಮೆಚ್ಚಿಕೊಂಡಿದ್ದಾರೆ. ಇದೊಂದು ಸಕಾಲಿಕ ಸಿನೆಮಾ ಆಗಿದ್ದು ಎಲ್ಲರೂ ನೋಡಬಹುದಾದ್ದು ಎಂದಿದ್ದಾರೆ.
''ನಾನು '100' ಹೆಸರಿನ ಕನ್ನಡ ಸಿನಿಮಾ ನೋಡಿದೆ. ಈ ಸಿನಿಮಾ ಬಹಳ ಚೆನ್ನಾಗಿದೆ. ಇತ್ತೀಚೆಗೆ ಯುವಜನ ಮೊಬೈಲ್ ಹಾಗೂ ಕಂಪ್ಯೂಟರ್‌ಗೆ ದಾಸರಾಗಿದ್ದಾರೆ. ಗೊತ್ತಿಲ್ಲದ ವ್ಯಕ್ತಿಗಳೊಟ್ಟಿಗೆ ಫೇಸ್‌ಬುಕ್‌ನಲ್ಲಿ ಗೆಳೆತನ ಮಾಡಿಕೊಳ್ಳುತ್ತಾರೆ. ಗೆಳೆತನ ತಪ್ಪಲ್ಲ, ಆದರೆ ಅಪರಿಚತ ವ್ಯಕ್ತಿಗಳೊಟ್ಟಿಗೆ ತಮ್ಮ ಅಂತರಂಗ ತೆರೆದಿಡುವುದು ತಪ್ಪು, ಆ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳು ಹೇಗೆ ಬಳಸಿಕೊಳ್ಳುತ್ತಾರೆ. ಅದರಿಂದ ಕುಟುಂಬ, ಸಮಾಜ ಏನು ಕಷ್ಟಗಳು ಅನುಭವಿಸಬೇಕಾಗುತ್ತದೆ ಎನ್ನುವುದರ ಮೇಲೆ ಈ ಸಿನಿಮಾ ಬೆಳಕು ಚೆಲ್ಲಿದೆ'' ಎಂದಿದ್ದಾರೆ ಸುಧಾಮೂರ್ತಿ.
PublicNext
22/11/2021 04:41 pm