ಮುಂಬೈ:ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಈಗ ಖುಷಿಯಲ್ಲಿಯೇ ಇದ್ದಾರೆ. ಮಗನ ಸಿನಿಮಾದ ಆ ಒಂದು ಟ್ರೈಲರ್ ಕಂಡು ಕಳೆದೇ ಹೋಗಿದ್ದಾರೆ. ನೀನು ನನ್ನ ಮಗ ಅಂತ ಹೇಳಲು ನಾನು ಹೆಮ್ಮೆ ಪಡುತ್ತೇನೆ ಅಂತಲೂ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅಭಿಷೇಕ್ ಬಚ್ಚನ್ ಅಭಿನಯದ ಬಾಬ್ ಬಿಸ್ವಾಸ್ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್ ನಲ್ಲಿ ಅಭಿಷೇಕ್ ಅಭಿನಯ ಕಂಡು ಸಂತೋಷ ಪಟ್ಟಿರೋ ಅಮಿತಾಭ್ ಬಚ್ಚನ್, ಆ ಖುಷಿಯನ್ನ ಇನ್‌ಸ್ಟಾಗ್ರಾಮ್‌ನಲ್ಲೂ ಬರೆದು ಹಂಚಿಕೊಂಡಿದ್ದಾರೆ.ಅದೇ ಪೋಸ್ಟ್ ಈಗ ಹೆಚ್ಚು ಗಮನ ಸೆಳೆಯುತ್ತಿದೆ.
PublicNext
20/11/2021 02:13 pm