ಬೆಂಗಳೂರು: ಪೇಜಾವರ ಶ್ರೀಗಳ ಕುರಿತು ವಿವಾದಾತ್ಮಕ ಹೇಳಿಕೆ ಕೊಟ್ಟ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಬೆಂಗಳೂರಿನ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ನಿವಾಸಿ ಕೃಷ್ಣ ರಾಜ ದೂರು ನೀಡಿದ್ದು, ಹಂಸಲೇಖ ಅವರ ಹೇಳಿಕೆಯಿಂದ ತಮ್ಮ ನಂಬಿಕೆಗೆ ಘಾಸಿಯಾಗಿದೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಸಾಮರಸ್ಯಕ್ಕಾಗಿ ಪೇಜಾವರ ಸ್ವಾಮೀಜಿಗಳು ಕೈಗೊಂಡ ಕಾರ್ಯದ ಬಗ್ಗೆ ಹಂಸಲೇಖ ಅವರು ಲೇವಡಿಯಾಗಿ ಮಾತನಾಡಿ, ತಮ್ಮ ಆರಾಧ್ಯ ದೈವ ಬಿಳಿಗಿರಿ ರಂಗಸ್ವಾಮಿ ದೇವರ ಬಗೆಗಿನ ಜನಪದೀಯ ಕಥೆಯನ್ನೂ ಹಂಸಲೇಖ ತುಚ್ಛವಾಗಿ ಪರಿಗಣಿಸಿದ್ದಾರೆ.
ಇದರಿಂದಾಗಿ ನಮ್ಮ ಧಾರ್ಮಿಕ ನಂಬಿಕೆ ಹಾಗೂ ಆಸ್ತಿಕ ಸಮಾಜದ ಸಾಮರಸ್ಯಕ್ಕೆ ಧಕ್ಕೆ ಉಂಟಾಗಿದ್ದು ಇದರಿಂದ ಆಗಿರುವ ತೊಂದರೆಗೆ ಹಂಸಲೇಖ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರುದಾರರು ಮನವಿ ಮಾಡಿದ್ದಾರೆ. ಹನುಮಂತನಗರ ಪಿಎಸ್ ಐ ದೂರನ್ನು ದಾಖಲಿಸಿಕೊಂಡಿದ್ದಾರೆ.
PublicNext
16/11/2021 09:57 pm