ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್,ಪುನೀತ್ ಅಭಿಮಾನಿಗಳಿಗೆ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.
ಪುನೀತ್ ಅಗಲಿಕೆಯಿಂದ ಇಡೀ ನಾಡು ದುಃಖ ಪಟ್ಟಿದೆ.ಪುನೀತ್ ನೇತ್ರದಾನವನ್ನ ಸ್ಪೂರ್ತಿಯಾಗಿಯೇ ತೆಗೆದುಕೊಳ್ಳುತ್ತಿದ್ದಾರೆ.ನೇತ್ರದಾನ ಮಾಡ್ತೀವಿ ಅಂತಲೂ ನೋಂದಣಿ ಮಾಡ್ತಿದ್ದೀರಾ.ನಿಮ್ಮಂತಹ ಅಭಿಮಾನಿ ದೇವರುಗಳಿಗೆ ಧನ್ಯವಾದ.
ಯಾವುದೇ ಅಹಿತಕರ ಘಟನೆ ಆಗದಂತೇನೆ ನೀವೂ ನಡೆದುಕೊಂಡಿದ್ದೀರಾ. ವಯಸ್ಸಿನ ಹಂಗಿಲ್ಲದೇ ತೋರಿದ ಪ್ರೀತಿ ಅಭಿಮಾನಕ್ಕೆ ನಮ್ಮ ಇಡೀ ಕುಟುಂಬ ಹೃತ್ಪೂರ್ವಕ ಧನ್ಯವಾದ ಅರ್ಪಿಸುತ್ತದೆ ಎಂದು, ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಪತ್ರದ ಮೂಲಕ ಪುನೀತ್ ಅಭಿಮಾನಿಗಳಿ ಧನ್ಯವಾದ ತಿಳಿಸಿದ್ದಾರೆ.
PublicNext
16/11/2021 08:02 pm