ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಗಚೈತನ್ಯ ನಟನೆ ಬಂಗಾರರಾಜು 2 ತಂಡದ ಅವಾಂತರ: ಮೇಲುಕೋಟೆ ಜನರ ತೀವ್ರ ಆಕ್ರೋಶ

ಮಂಡ್ಯ:ಟಾಲಿವುಡ್ ನಾಯಕ ನಟ ನಾಗಚೈತನ್ಯ ಅಭಿನಯದ ಬಂಗಾರರಾಜು 2 ಚಿತ್ರ ತಂಡ ಮೇಲುಕೋಟೆಯಲ್ಲಿ ಸದ್ಯ ಚಿತ್ರೀಕರಣ ಮಾಡುತ್ತಿದೆ. ಆದರೆ, ಪರವಾನಗಿ ಇಲ್ಲದೇ ಇಲ್ಲಿ ಚಿತ್ರೀಕರಣಕ್ಕಾಗಿಯೇ ಕ್ರೇನ್ ತೆಗೆದುಕೊಂಡು ಬರಲಾಗಿದೆ. ಇದನ್ನ ಕಂಡ ಜನ ಈಗ ತೀವ್ರ ವಿರೋದ ವ್ಯಕ್ತಪಡಿಸುತ್ತಿದ್ದಾರೆ. ಐತಿಹಾಸಿಕ ಕಲ್ಯಾಣಿಗೂ ಧಕ್ಕೆ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ನಾಗಚೈತನ್ಯ ಅಭಿನಯದ ಬಂಗಾರರಾಜು 2 ಚಿತ್ರ ತಂಡ ಯಡವಟ್ಟು ಮಾಡಿಕೊಂಡಿದೆ. ಪರವಾನಗಿ ಇಲ್ಲದೇ ಇಲ್ಲಿ ಕ್ರೇನ್ ತೆಗೆದುಕೊಂಡು ಬಂದಿದೆ. ಸುರಿದ ಮಳೆಗೆ ಕೆಸರಲ್ಲಿ ಈ ಕ್ರೇನ್ ಸಿಕ್ಕಿ ಬಿದ್ದಿದೆ.ಇದನ್ನ ತೆಗೆಯಲು ಚಿತ್ರ ತಂಡ ಹರಸಾಹಸ ಪಡುತ್ತಿದೆ.

ಆದರೆ ಇದನ್ನ ಕಂಡ ಸ್ಥಳಿಯರು ಆಕ್ರೋಶ ವ್ಯಕ್ತಪಿಸುತ್ತಿದ್ದಾರೆ. ಕ್ರೇನ್ ತೆಗೆಯಲು ಇಲ್ಲಿಗೆ ಜೆಸಿಬಿ ಬಳಸಿದರೆ ಇಲ್ಲಿಯ

ಐತಿಹಾಸಿಕ ಕಲ್ಯಾಣಿಗೆ ಧಕ್ಕೆ ಆಗುತ್ತದೆ ಅಂತಲೇ ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬೈಟ್: ಸ್ಥಳೀಯರು

Edited By : Nagesh Gaonkar
PublicNext

PublicNext

15/11/2021 04:29 pm

Cinque Terre

41.13 K

Cinque Terre

1