ಮೈಸೂರು:ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯ ಮದಗಜ ಚಿತ್ರ ಇದೇ ಡಿಸೆಂಬರ್-03 ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.ಈ ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಲೇಬೇಕು ಅಂತಲೇ ಮೈಸೂರಿನ ಶ್ರೀಮುರಳಿ ಅಭಿಮಾನಿಯೊಬ್ಬ ತಮ್ಮ ಕಾಲೇಜಿನ ಪ್ರಿನ್ಸಿಪಾಲರಿಗೆ ಪತ್ರ ಬರೆದು ರಜೆ ಕೊಡಿ ಅಂತಲೇ ಕೇಳಿದ್ದಾನೆ.
ಹೌದು.ಸಿನಿಮಾದ ಕ್ರೇಜ್ ಅಂದ್ರೇ ಹೀಗಿರುತ್ತದೆ.ಅದರಂತೆ ಮೈಸೂರಿನ ಜ್ಞಾನೋದಯ ಪಿಯು ಕಾಲೇಜ್ ನ ವಿಕ್ರಂ ಹೆಸರಿನ ವಿದ್ಯಾರ್ಥಿ ಪಕ್ಕಾ ಶ್ರೀಮುರಳಿ ಅಭಿಮಾನಿ. ಅದಕ್ಕೇನೆ ಮದಗಜ ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಲೇಬೇಕು ಅಂತಲೇ ವಿಕ್ರಮ ತಮ್ಮ ಕಾಲೇಜು ಪ್ರಿನ್ಸಿಪಾಲರಿಗೆ ಪತ್ರ ಬರೆದಿದ್ದಾನೆ. ಬರೆದು ಚಿತ್ರವನ್ನ ನೋಡಲು ರಜೆ ಕೊಡಿ ಅಂತಲೂ ಕೇಳಿದ್ದಾನೆ. ರಜೆ ಕೊಟ್ಟರೋ ಇಲ್ಲವೋ ಗೊತ್ತಿಲ್ಲ.ಆದರೆ ರಜೆ ಕೇಳಿದ ಲೆಟರ್ ಈಗ ಭಾರಿ ಗಮನ ಸೆಳೆಯುತ್ತಿದೆ.
PublicNext
15/11/2021 12:44 pm