ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಚಿಕ್ಕಬಳ್ಳಾಪುರ ತಾಲ್ಲೂಕು ರಂಗಸ್ಥಳದ ಬಳಿ ಇರುವ ಮಾನಸ ವೃದ್ಧಾಶ್ರಮದಲ್ಲಿ ನಡೆದ ಪುನೀತ್ ನೆನಪು ಕಾರ್ಯಕ್ರಮದಲ್ಲಿ ಕೆಜಿಎಫ್ ವಿಲನ್ ಖ್ಯಾತಿಯ ಗರುಡಾ ರಾಮ್ ಭಾಗವಹಿಸಿ ಪುನೀತ್ ರಾಜ್‍ಕುಮಾರ್ ಅವರ ಜನಪರ ಕಾರ್ಯಗಳನ್ನ ಕೊಂಡಾಡಿದರು.
ಹಲವಾರು ಸಮಾಜಮುಖಿ ಕಾರ್ಯಗಳನ್ನು ಎಲೆಮರೆ ಕಾಯಿಯಂತೆ ಕೈಗೊಂಡಿದ್ದ ಪುನೀತ್ ರಾಜ್‍ಕುಮಾರ್ ಅವರ ಕಾರ್ಯಗಳು ಎಲ್ಲರಿಗೂ ಆದರ್ಶನೀಯ ಎಂದು ನಟ ಗರುಡಾ ರಾಮ್ ಬಣ್ಣಿಸಿದರು. ಇದೇ ವೇಳೆ ವೃದ್ಧಾಶ್ರಮದ ವೃದ್ಧರು ನಟ ಪುನೀತ್ ರಾಜ್‍ಕುಮಾರ್ ರ ಸಮಾಜಮುಖಿ ಕಾರ್ಯಗಳನ್ನು ನೆನೆದು ಕಣ್ಣೀರು ಹಾಕಿದರು.
PublicNext
14/11/2021 06:59 pm