ಜೋಗಿ ಪ್ರೇಮ್ ಸಿನಿಮಾ ಅಂದ್ರೆ ಒಂದು ಬ್ರಾಂಡ್, ಸಖತ್ ಸೌಂಡ್ ಎರಡುಇರುತ್ತೆ. ಇದನ್ನ ಶೋ ಮ್ಯಾನ್ ಪ್ರೇಮ್ ಸಾಕಷ್ಟು ಸಲ ಫ್ರೂವ್ ಮಾಡಿದ್ದಾರೆ. ಅದು ಸಾಲದು ಎಂಬಂತೆ ಮತ್ತೆ ಈಗ ಬಾಮೈದನ ಜೊತೆ ಎಣ್ಣೆ ಬಾಟ್ಲು ಹಿಡ್ಕಂಡು. ರಚ್ಚುನ ಟೈಟ್ ಮಾಡ್ಸಿ. ಸೂಪರ್ ಸಿಂಗರ್ ಮಂಗ್ಲಿ ಕಂಠದಲ್ಲಿ ಹಾಡಿನ ಕಿಕ್ ಹೆಚ್ಚಿಸಿ. ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಭಗವಂತ ಅಂತಾವ್ರೆ ಶೋ ಮ್ಯಾನ್ ಪ್ರೇಮ್.
ಪ್ರೇಮ್ ಸಿನಿಮಾಗಳೇ ಹಾಗೆ ಕಲರ್ ಪುಲ್ ಮೇಕಿಂಗ್, ಊಹೇ ಮಾಡಲಾಗದ ಸಂಗೀತ ಮೂಲಕವೇ ಸಿನಿ ರಸಿಕರಲ್ಲಿ ಕಿಚ್ಚು ಹಚ್ಚುತ್ತಾರೆ.. ಕರಿಯಾ ಚಿತ್ರದಿಂದ ಇನ್ನು ರಿಲೀಸ್ ಆಗದ ಏಕ್ ಲವ್ ಯಾ ಚಿತ್ರದ ವರೆಗೂ ಪ್ರೇಮ್ ಸಿನಿಮಾ ಹಾಡುಗಳು ಸೆನ್ಸೇಷನ್ ಕ್ರಿಯೇಟ್ ಮಾಡಿವೆ..ಈಗಾಗಲೇ ಎರಡು ಹಾಡುಗಳ ಮೂಲಕ ಏಕ್ ಲವ್ ಯಾನ ಕ್ರೇಜ್ ಹೆಚ್ಚಿಸಿರುವ ಪ್ರೇಮ್.. 3 ನೇ ಹಾಡನ್ ಕಲರ್ ಪುಲ್ ಕಾರ್ಯಕ್ರಮದ. ಚಂದನವನದ ಚೆಂದದ ನಾಯಕಿಯ ಕೈಯಲ್ಲಿ ಬಾಟ್ಲಿ ಕೊಟ್ಟು.. ಎಣ್ಣೆ ಹಾಡನ್ನು ಗ್ರಾಂಡ್ ಆಗಿ ರಿಲೀಸ್ ಮಾಡಿದ್ದಾರೆ ಡೈರೆಕ್ಟರ್ ಪ್ರೇಮ್.
ದಿ ವಿಲನ್ ಚಿತ್ರದ ನಂತ್ರ ಪ್ರೇಮ್ ಸ್ಟಾರ್ ಸಿನಿಮಾಗೆ ಕೈ ಹಾಕದೆ, ತನ್ನ ಬಾಮೈದನ್ನೆ ಸ್ಟಾರ್ ಮಾಡಲು ಸಜ್ಜಾಗಿದ್ದು, ಗುರುವಿಲ್ಲದ ವಿದ್ಯೆ ಲವ್ ಅನ್ನೆ ಸರಕನ್ನಾಗಿ ಅಯ್ಕೆ ಮಾಡ್ಕೊಂಡು ಒಂದೊಳ್ಳೆ ಕತೆ ರೆಡಿ ಮಾಡಿ ಸ್ಯಾಂಡಲ್ ವುಡ್ ಗೆ ರಾಣನ ಪರಿಚಯ ಮಾಡಲು ಹೊರಟಿದ್ದಾರೆ. ಅದಕ್ಕೆ ತಕ್ಕಂತೆ ಎಣ್ಣೆ ಹಾಡನ್ನು ಅದ್ದೂರಿ ಯಾಗಿ ರಿಲೀಸ್ ಮಾಡಿದ್ದಾರೆ ಪ್ರೇಮ್. ಅಲ್ಲದೆ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ಹೀರೋಹಿನ್ ಗಳಿಂದ ಲವ್ ಪೆಕ್ಯೂರ್ ಬಗ್ಗೆ ಪಾಠ ಮಾಡಿಸಿ. ಲವ್ ಬ್ರೇಕ್ ಅಪ್ ಅದ್ರೆ ಹೆಣ್ ಮಕ್ಳು ಎಣ್ಣೆ ಹೊಡಿ ಬಾರ್ದು ಅಂತ ಎಲ್ಲಾದ್ರು ಬೋರ್ಡ್ ಹಾಕಿದ್ದಾರ ಅಂತ ರಚ್ಚು ಮೂಲಕ ಕಿಚ್ಚು ಹಚ್ಚಿದ್ದಾರೆ.
ಈ ಹಿಂದೆ ಒಂದು ಲವ್ ಸಾಂಗ್ ಮತ್ತು ಬ್ರೇಕ್ ಅಪ್ ಸಾಂಗ್ ಮೂಲಕ ಸೌಂಡ್ ಮಾಡಿದ್ದ ಏಕ್ ಲವ್ ಯಾ ಈಗ ಎಣ್ಣೆ ಹಾಡಿನ ಮೂಲಕ ಸಿನಿ ರಸಿಕರ ಕಿಕ್ ಹೆಚ್ಚಿಸಿದ್ದಾನೆ.. ಮಂಗಲಿ ಕಂಠದಲ್ಲಿ ಮೂಡಿ ಬಂದಿರುವ ಈ ಹಾಡಿನಲ್ಲಿ ರಚಿತಾ ಸಖತ್ ಬೋಲ್ಡ್ ಆಗಿ ಕಾಣಿಸಿ..ಇವರೆನಾ ಬುಲು ಬುಲ್ ರಚಿತಾ ಅನ್ನೋವಷ್ಟು ಹುಬ್ಬೆರುವಂತೆ ಕಾಣಿಸಿದ್ದಾರೆ.
ಏಕ್ ಲವ್ ಯಾ ಚಿತ್ರ ಮುಂದಿನ ವರ್ಷ ಜನವರಿ 21ಕ್ಕೆ ರಿಲೀಸ್ ಮಾಡೋಕೆ ಈಗಾಗಲೇ ಪ್ರೇಮ್ ಡೇಟ್ ಅನೌನ್ಸ್ ಮಾಡಿದ್ದಾರೆ.. ಎಣ್ಣೆ ಹಾಡನ್ನು ಲಾಂಚ್ ಮಾಡುವ ಮೂಲಕ ಪ್ರಮೋಷನ್ ಕೆಲಸಕ್ಕೆ ಸಹಿ ಹಾಕಿರುವ ಪ್ರೇಮ್ ರಾಜ್ಯಾದ್ಯಂತ ಪ್ರವಾಸ ಮಾಡಿ ಗ್ರಾಂಡ್ ಆಗಿ ಏಕ್ ಲವ್ ಯಾ ತೆರೆ ಮೇಲೆ ತರಲು ಶೋ ಮ್ಯಾನ್ ಪ್ರೇಮ್ ಸಜ್ಜಾಗ್ತಿದ್ದಾರೆ.
ಕೃಪೆ: ಫಸ್ಟ್ ನ್ಯೂಸ್ ಕನ್ನಡ
PublicNext
14/11/2021 04:44 pm