ಬೆಂಗಳೂರು:ವಿವಾದ ಸೃಷ್ಟಿಸಿದ ಡಿಂಪಲ್ ಕ್ವೀನ್ ರಚಿತಾ ರಾಮ್ ಫಸ್ಟ್ ನೈಟ್ ಬಗೆಗಿನ ಬೋಲ್ಡ್ ರಿಯ್ಯಾಕ್ಷನ್.
ಹೌದು. ಲವ್ ಯು ರಚ್ಚು ಚಿತ್ರದ ಪ್ರೆಸ್ ಮೀಟ್ ನಲ್ಲಿ ‘ಮುದ್ದು ನೀನು’ ಹಾಡಿನಲ್ಲಿರೋ ಹಾಟ್ ಸೀನ್ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಫಸ್ಟ್ ನೈಟ್ ನಲ್ಲಿ ಎಲ್ಲ ಏನು ಮಾಡುತ್ತಾರೆ ಅದನ್ನೇ ನಾವು ಮಾಡಿದ್ದೇವೆ ಎಂದು ಹೇಳಿ ಮತ್ತೆ ಸುದ್ದಿ ಆಗಿದ್ದಾರೆ.
ರಚಿತಾ ರಾಮ್ ಅಭಿನಯದ ಶಂಕರ್ ರಾಜ್ ನಿರ್ದೇಶನದ ಲವ್ ಯು ರಚ್ಚು ಚಿತ್ರದಲ್ಲಿ ‘ಮುದ್ದು ನೀನು’ ಅನ್ನೊ ಹಾಡಿದೆ. ಇದರಲ್ಲಿ ಗೃಹಿಣಿ ಪಾತ್ರಧಾರಿ ರಚಿತಾ ಮತ್ತು ಪತಿ ಪಾತ್ರಧಾರಿ ಅಜಯ್ ರಾವ್ ಅಭಿನಯಿಸಿದ ಫಸ್ಟ್ ನೈಟ್ ಸೀನ್ ಒಂದು ಬರುತ್ತದೆ. ಇದರ ಬಗ್ಗೆ ಕೇಳಿದಾಗಲೇ ರಚಿತಾ ಹಿಂಗೆ ಯರ್ರಾಬಿರ್ರಿ ಮಾತಾಡಿದ್ದಾರೆ.
ರಚಿತಾ ಈ ಬೋಲ್ಡ್ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೈಸೂರಿನ ಕನ್ನಡ ಕ್ರಾಂತಿ ಸೇನೆ ಇದನ್ನ ಖಂಡಿಸಿದೆ.ಅಖಿಲ ಭಾರತ ಕರುನಾಡು ವೇದಿಕೆ ಜಿಲ್ಲಾಧ್ಯಕ್ಷ ಅಶೋಕ್ ರಾಜ್ ಕೂಡ ರಚಿತಾ ರಾಮ್ ಫಸ್ಟ್ ನೈಟ್ ಹೇಳಿಕೆಯನ್ನೂ ತೀವ್ರವಾಗಿಯೇ ಖಂಡಿಸಿದ್ದಾರೆ.
PublicNext
12/11/2021 05:57 pm