ಮುಂಬೈ:ಬಾಲಿವುಡ್ ನ ನಾಯಕ ನಟ ಸೈಫ್ ಅಲಿ ಖಾನ್ ಈ ವರ್ಷ ಸಿಕ್ಕಾಪಟ್ಟೆ ಸಿನಿಮಾ ಮಾಡ್ತಿದ್ದಾರೆ.ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬರ್ತಾನೆ ಇವೆ. ಮುಂಬರುವ ತಮ್ಮ ಬಂಟಿ ಔರ್ ಬಬ್ಲಿ-2 ಚಿತ್ರದ ಪ್ರಮೋಷನ್ ಗಾಗಿಯೆ ಕಪಿಲ್ ಶರ್ಮಾ ಶೋ ಗೆ ಬಂದಿದ್ದ ಸೈಫ್ ಅಲಿ ಖಾನ್,ಹೆಚ್ಚು ಹೆಚ್ಚು ಸಿನಿಮಾ ಮಾಡ್ತಿರೋದ ಹಿಂದಿನ ರಹಸ್ಯೆ ಬಿಚ್ಚಿಟ್ಟಿದ್ದಾರೆ. ಅದೇನೂ ನೀವೇ ನೋಡಿ.
ಸೈಫ್ ಅಲಿ ಖಾನ್ ಹಾಸ್ಯಭರತಿ ಕಾರ್ಯಕ್ರಮದಲ್ಲಿ ಹಾಸ್ಯದ ಚಟಾಕಿಗಳನ್ನೆ ಹಾರಿಸಿದ್ದಾರೆ. ಕಪಿಲ್ ಶರ್ಮಾ ತಮ್ಮ ಈ ಶೋದಲ್ಲಿ ಸೈಫ್ ಗೆ ಒಂದು ಪ್ರಶ್ನೆ ಕೇಳ್ತಾರೆ. ನೀವೂ ಅತಿ ಹೆಚ್ಚು ಸಿನಿಮಾ ಮಾಡ್ತಿದ್ದೀರಾ ಅದಕ್ಕೆ ಕಾರಣ ಏನು? ಮನೆಯಲ್ಲಿ ಇದ್ದರೆ ಮಕ್ಕಳಾಗುತ್ತವೆ ಅನ್ನೋ ಕಾರಣಕ್ಕೆ ಸಿನಿಮಾ ಮಾಡ್ತಿದ್ದೀರಿ ಅಲ್ವೇ ಅಂತ ಕೇಳ್ತಾರೆ. ಅದಕ್ಕೆ ಸೈಫ್ ಕೂಡ ಹೌದು, ಸಿನಿಮಾ ಮಾಡದೇನೆ ಮನೆಯಲ್ಲಿ ಕುಳಿತರೇ ಮಕ್ಕಳೆ ಆಗೋದು ಅಂತಲೇ ಹಾಸ್ಯಲೇಪಿತ ಆನ್ಸರ್ ಮಾಡಿದ್ದಾರೆ. ಈ ಮಾತುಗಳೇ ಕಾರ್ಯಕ್ರಮದ ಪ್ರಮೋದಲ್ಲಿಯೇ ಇವೆ. ಅಂದ್ಹಾಗೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಈ ಸೈಫ್ ಅಲಿ ಖಾನ್ ಮತ್ತು ರಾಣಿ ಮುಖರ್ಜಿ ಇರೋ ಈ ಶೋ ಪ್ರಸಾರ ಆಗುತ್ತಿದೆ.
PublicNext
12/11/2021 05:38 pm