ಬಡ ಗಾಯಕಿ ರಾನು ಮೊಂಡಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಸಲ ಗಾಯನದಿಂದಷ್ಟೇ ವೈರಲ್ ಆಗಿಲ್ಲ. ಗಾನ-ಖಾನ ಅನ್ನೋ ಹಾಗೇ ರಾನು ತಮ್ಮ ಮನೆಯಲ್ಲಿ ಚಿಕನ್ ಕರೀ ತಯಾರು ಮಾಡ್ತಾನೇ ಹಾಡನ್ನ ಹಾಡಿ ಗಮನ ಸೆಳೆದಿದ್ದಾರೆ.
ರಾನು ಮೊಂಡಲ್ ಸಡನ್ ಆಗಿಯೇ ಖ್ಯಾತಿಗೆ ಬಂದೋರು. ತಮ್ಮ ವಿಶಿಷ್ಟ ಶೈಲಿಯ ಗಾಯನದ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದವರು.ಆದರೆ ಅದು ಬಹಳ ದಿನ ಉಳಿಯಲಿಲ್ಲ ಬಿಡಿ. ಅದು ಬೇರೆ ಮಾತು. ಈಗ ಇದೇ ರಾನು ಮೊಂಡಲ್ ಮತ್ತೆ ಜನರ ಮನಸ್ಸು ಕದೀಯುತ್ತಿದ್ದಾರೆ.
ಖಾನ-ಗಾನ ಪರಿಕ್ಪನೆಯಲ್ಲಿಯೇ ಬೆಂಗಾಳಿ ಯುಟ್ಯೂಬರ್ ರೋಂಧೊನ್ ಜೊತೆಗೆ ಒಂದ್ ವೀಡಿಯೊ ಮಾಡಿದ್ದಾರೆ. ಇದರಲ್ಲಿ ರಾನು ಮತ್ತು ರೋಂಧೊನ್ ಜೊತೆ ಜೊತೆಗೆ ಅಡುಗೆ ಮಾಡುತ್ತಾರೆ. ಜೊತೆ ಜೊತೆಗೆ ಹಾಡೂ ಹಾಡ್ತಾರೆ. ಈ ಒಂದು ಯುಟ್ಯೂಬ್ ವೀಡಿಯೋ ಈಗ ಹೆಚ್ಚು ಹೆಚ್ಚು ಶೇರ್ ಆಗುತ್ತಿದೆ. ಹೆಚ್ಚು ಹೆಚ್ಚು ವೈಲರ್ ಕೂಡ ಆಗುತ್ತಿದೆ.
PublicNext
09/11/2021 06:52 pm