ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 'ಅಪ್ಪು ಸರ್ ಮನೆಗೆ ಕರೆದು ಬುಕ್ ಬ್ಯಾಗ್ ಗಿಫ್ಟ್ ಕೊಟ್ಟಿದ್ದರು'

ಹುಬ್ಬಳ್ಳಿ: ನಾನು ಅಪ್ಪು ಸರ್ ಅವರ ಅಪ್ಪಟ್ಟ ಅಭಿಮಾನಿ. ಅವರು ನನಗೆ ಕುಳ್ಳ ಕುಳ್ಳ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಅಲ್ಲದೇ ನನಗೆ ಮನೆಗೆ ಕರೆದು ಪ್ರೀತಿಯಿಂದ ಮಾತನಾಡಿಸಿ, ಬ್ಯಾಗ್ ಗಿಫ್ಟ್ ಕೊಟ್ಟರು. ಅಣ್ಣಾವ್ರ ಒಂದು ಬುಕ್ ಕೊಟ್ಟು ಕಳಿಸಿದರು ಎಂದು ಡ್ರಾಮಾ ಜ್ಯೂನಿಯರ್ ಖ್ಯಾತಿಯ ಮಹೇಂದ್ರ ಅವರು ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಕೊಂಡಿದ್ದಾರೆ.

ಅಪ್ಪು ಸರ್ ತೀರಿ ಹೋದ ಸಂದರ್ಭದಲ್ಲಿ ಬೆಂಗಳೂರಿನಲ್ಲಿಯೇ ಇದ್ದೆ. ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮದ ತಯಾರಿಯಲ್ಲಿದ್ದೆ. ಆಗ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಕೇಳಿ ತುಂಬಾ ಆಘಾತವಾಯಿತು. ಡ್ಯಾನ್ಸ್ ಶೋ ಕೂಡ ಉದ್ಘಾಟನೆ ಮಾಡಿದ್ದು ಅಪ್ಪು ಸರ್. ಅಷ್ಟೇ ಅಲ್ಲದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ 125 ದಿನಗಳ ಪೂರೈಸಿದ ಹಿನ್ನೆಲೆಯಲ್ಲಿ ಅಪ್ಪು ಸರ್ ತುಂಬಾ ಪ್ರೀತಿ ವಿಶ್ವಾಸದಿಂದ ಮಾತಾಡಿಸಿದ್ದರು. ಅಲ್ಲದೇ ಯುವರತ್ನ ಸಿನಿಮಾದಲ್ಲೂ ನಟಿಸಿದ್ದೆ. ಅವಾಗಲೂ ನಂಗೆ ಕುಳ್ಳ ಕುಳ್ಳ ಎಂದು ಕರೆಯುತ್ತಿದ್ದರು‌. ಅವರು ಇನ್ನಿಲ್ಲ ಎಂಬುದು ತುಂಬಾ ಬೇಜಾರ ಆಗತ್ತಾ ಇದೆ. ಅಪ್ಪು ಸರ್ ವ್ಯಕ್ತಿತ್ವ ಹೇಗೆ ಎಂದರೆ ಹಿರಿಯರ ಜೊತೆಗೆ ಹಿರಿಯರಾಗಿ, ಮಕ್ಕಳ ಜೊತೆಗೆ ಮಕ್ಕಳಾಗಿ ಇರುವಂತವರು. ಅವರ ರಾಜ್‌ಕುಮಾರ್, ಮೌರ್ಯ, ಅಪ್ಪು ನನಗೆ ಇಷ್ಟವಾದ ಸಿನಿಮಾ ಎಂದು ಮಹೇಂದ್ರ ಹೇಳಿದರು.

Edited By : Manjunath H D
PublicNext

PublicNext

09/11/2021 06:18 pm

Cinque Terre

39.83 K

Cinque Terre

2