ಬೆಂಗಳೂರು: ಪುನೀತ್ ರಾಜ್ ಕುಮಾರ್ ಆಸೆಯಂತೆ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚಿನ ಜನರಿಗೆ ವೆಜ್ ಮತ್ತು ನಾನ್ ವೆಜ್ ಊಟದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 11 ಗಂಟೆಗೆ ಹೊತ್ತಿಗೇನೆ ಇಲ್ಲಿ ಊಟದ ವ್ಯವಸ್ಥೆ ಆರಂಭಗೊಂಡಿತ್ತು. ಸಾವಿರಾರು ಜನ ಅಭಿಮಾನಿಗಳು ಇಲ್ಲಿಗೆ ಬಂದು ಪುನೀತ್ 'ಕಾರ್ಯ'ದ ಊಟ ಮಾಡಿ ಹೋಗಿದ್ದಾರೆ.
ಪುನೀತ್ ಇರೋವಾಗ್ಲೂ ತಮ್ಮ ಪತ್ನಿಗೆ ಹೇಳ್ತಿದ್ರಂತೆ, ಒಮ್ಮೆಯಾದರೂ ಅಭಿಮಾನಿಗಳಿಗೆ ಒಳ್ಳೆ ಊಟ ಮಾಡಿಸಬೇಕು ಅಂತ. ಅದನ್ನ ಈಗ ಪುನೀತ್ ಪತ್ನಿ ಅಶ್ವಿನಿ ಹಾಗೂ ಶಿವರಾಜ್ ಕುಮಾರ್ ನೇತೃತ್ವದಲ್ಲಿಯೇ ಇಂದು ಬೃಹತ್ ಮಟ್ಟದಲ್ಲಿ ಊಟದ ವ್ಯವಸ್ಥೆ ಆಗಿದೆ. 18 ಸಾವಿರಕ್ಕೂ ಹೆಚ್ಚು ಜನ ಬಾಳೆ ಎಲೆಯಲ್ಲಿಯೇ ಊಟ ಮಾಡಿದ್ದಾರೆ.
ಚಿಕ್ಕಮಗಳೂರಿನಿಂದಲೇ ತರಿಸಿದ್ದ 2 ಟನ್ ಚಿಕನ್ ನಲ್ಲಿಯೇ ನಾನ್ ವೆಜ್ ವಿವಿಧ ಐಟಂ ಗಳನ್ನ ಅಡುಗೆಯವರು ಇಲ್ಲಿ ತಯಾರಿಸಿದ್ದಾರೆ. ವೆಜ್ ನಲ್ಲೂ ವಿವಿಧ ಐಟಂಗಳನ್ನ ಮಾಡಿದ್ದರು. ಇಲ್ಲಿಗೆ ಬಂದ ಜನಕ್ಕೆ 7 ಪಂಕ್ತಿಗಳಲ್ಲಿಯೇ ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಇಲ್ಲಿ ಬಂದವರಿಗೆ ಊಟ ಕಡಿಮೆ ಆಗಲೇ ಬಾರದು ಅಂತಲೇ ಅಡುಗೆಯವರು ಎಲ್ಲವನ್ನ ರೆಡಿ ಮಾಡಿಕೊಂಡೆ ಇದ್ದರು. ಪುನೀತ್ ಸಹೋದರ ಶಿವರಾಜ್ ಕುಮಾರ್ ನೇತೃತ್ವದಲ್ಲಿಯೇ ಈ ಎಲ್ಲ ಕಾರ್ಯ ನಡೆದಿದೆ.
PublicNext
09/11/2021 04:13 pm