ದಿ.ಶಂಕರ್ ನಾಗ್ ಅವರಿಗೆ ಇಂದು 67ನೇ ಜನ್ಮದಿನ. ನಟನೆ, ನಿರ್ದೇಶನ, ನಿರ್ಮಾಣದ ಮೂಲಕ ಜನರ ಮನ ಗೆದ್ದ ಮೇರು ನಟ ತಮ್ಮ 36 ನೇವಯಸ್ಸಿನಲ್ಲೇ ಇಹಲೋಕ ತ್ಯಜಿಸಿದರು.ಆದರೆ ‘ಆಟೋ ರಾಜ’ ಮಾತ್ರ ಅಭಿಮಾನಿಗಳ ಹೃದಯದಲ್ಲಿ ಅಜರಾಮರರಾಗಿದ್ದಾರೆ. ಇಂದು ಅಗಲಿದ ನಟನ ಜನ್ಮದಿನದಂದು ಅವರನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ.
ನವೆಂಬರ್ 9, 1954ರಂದು ಉತ್ತರ ಕನ್ನಡದ ಹೊನ್ನಾವರದಲ್ಲಿ ಆನಂದಿ ಮತ್ತು ಸದಾನಂದ್ ನಾಗರಕಟ್ಟೆ ದಂಪತಿಗಳಿಗೆ ಜನಿಸಿದವರು ಶಂಕರ್ ನಾಗ್. ಅವರು ಇಂದು ನಮ್ಮೊಂದಿಗೆ ಇದ್ದಿದ್ದರೆ ತಮ್ಮ 67ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು.ಮರಾಠಿ ನಾಟಕಗಳಿಂದ ಪ್ರಭಾವಿತರಾಗಿ ಕನ್ನಡದಲ್ಲಿ ಹೊಸ ಪ್ರಯೋಗಗಳನ್ನು ಕೈಗೊಂಡಿದ್ದ ಅವರು, ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಶಂಕರ್ ನಾಗ್ ಅವರ ಜನ್ಮದಿನವಾದ ಇಂದು ಅಭಿಮಾನಿಗಳು, ರಾಜಕಾರಣಿಗಳು ಮತ್ತು ತಾರೆಯರು ಅವರನ್ನು ಸ್ಮರಿಸುತ್ತಿದ್ದಾರೆ.
PublicNext
09/11/2021 03:32 pm