ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುನೀತ್ ಗೆ ಸಿಗುವುದೇ ಪದ್ಮಶ್ರೀ ಪ್ರಶಸ್ತಿ ?

ಬೆಂಗಳೂರು:ಪುನೀತ್ ರಾಜಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನ ಕೊಡಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯನವ್ರು ಕೂಡ ಪುನೀತ್ ಅಗಲಿದ ಮೂರನೇ ದಿನಕ್ಕೇನೆ ಪದ್ಮಶ್ರೀ ಕೊಡಿ ಅಂತ ಟ್ವಿಟರ್ ಮೂಲಕ ಆಗ್ರಹಿಸಿದ್ದರು. ಈ ನಿಟ್ಟಿನಲ್ಲಿಯೇ ಈಗ ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗಿದೆ ಅಂತಲೇ ಹೇಳಲಾಗುತ್ತಿದೆ.

ಪುನೀತ್ ರಾಜಕುಮಾರ್ ಈಗ ಇಲ್ಲ.ಆದರೆ ಪುನೀತ್ ಜನ ಮಾನಸದಲ್ಲಿ ಇನ್ನೂ ಹಾಗೆ ಇದ್ದಾರೆ. ಅಗಲಿದ ನಾಯಕನಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿ ಅಂತಲೇ ಕೂಗು ಕೇಳಿ ಬರುತ್ತಿದೆ. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ, ನವೆಂಬರ್-16 ಬಳಿಕ ರಾಜಕುಮಾರ್ ಕುಟುಂಬದ ಜೊತೆಗೆ ಚರ್ಚಿಸಲಿದೆ. ಸರ್ಕಾರದ ಮಟ್ಟದಲ್ಲಿ ಈ ಕುರಿತು ಚರ್ಚೆ ನಡೆಸಿ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Edited By :
PublicNext

PublicNext

06/11/2021 05:20 pm

Cinque Terre

33.99 K

Cinque Terre

3