ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪು ಸಮಾಧಿ ಮುಂದೆ ಪ್ರೇಮಿಗಳ ಮ್ಯಾರೇಜ್

ಬೆಂಗಳೂರು: ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಲ್ಲದ ಸತ್ಯವನ್ನು ಒಪ್ಪಿಕೊಳ್ಳುತ್ತಿಲ್ಲ. ಅಪ್ಪು ನಮ್ಮನಗಲಿ 9 ದಿನಗಳಾದರೂ ಸಮಾಧಿ ದರ್ಶನಕ್ಕೆ ಬರುತ್ತಿರುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ.

ಇಂದು ಪ್ರೇಮಿಗಳಿಬ್ಬರು ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಮಾಧಿ ಬಳಿಯೇ ಮದುವೆಯಾಗಲು ಆಗಮಿಸಿದೆ.

ಗುರು ಪ್ರಸಾದ್ ಹಾಗೂ ಗಂಗಾ ಎಂಬವರು 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬಳ್ಳಾರಿಯಿಂದ ಮದುವೆಯಾಗಲು ತಾಳಿ ಸಮೇತ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಬಂದಿದ್ದಾರೆ.

ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಜೋಡಿ, ಪುನೀತ್ ಅಂದರೆ ನಮಗೆ ತುಂಬಾ ಇಷ್ಟ. ಕುಟುಂಬಸ್ಥರಿಂದ ನಮ್ಮ ಮದುವೆಗೆ ಯಾವುದೇ ಅಡ್ಡಿಯಿಲ್ಲ. ನಮ್ಮಿಬ್ಬರ ಕುಟುಂಬದವರ ಒಪ್ಪಿಗೆ ಇದೆ ಎಂದು ಡಾ. ರಾಜ್ ಕುಮಾರ್ ಅವರ ಕುಟುಂಬಕ್ಕೆ ಮನವಿ ಮಾಡಿಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

06/11/2021 03:23 pm

Cinque Terre

30.85 K

Cinque Terre

1